ನೆತ್ತರಕೆರೆ ::"ಆಟಿಡೊಂಜಿ ಗಮ್ಮತ್" ಆಷಾಡ ಮಾಸದ ವಿಶೇಷ ಕಾರ್ಯಕ್ರಮ.

Coastal Bulletin
ನೆತ್ತರಕೆರೆ ::"ಆಟಿಡೊಂಜಿ ಗಮ್ಮತ್" ಆಷಾಡ ಮಾಸದ ವಿಶೇಷ ಕಾರ್ಯಕ್ರಮ.

ಬಂಟ್ವಾಳ :ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಆಶ್ರಯದಲ್ಲಿ ಆಟಿಡೊಂಜಿ ಗಮ್ಮತ್ ಎಂಬ ಆಷಾಡ ಮಾಸದ ವಿಶೇಷ ಕಾರ್ಯಕ್ರಮವು ನೆತ್ತರಕೆರೆಯಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಜ್ಯೋತಿ ದೇವದಾಸ್ ಕೊಡ್ಮನ್ ಇವರು ಉದ್ಘಾಟಿಸಿ ಶುಭ ಹಾರೈಸಿದರು.ಊರಿನ ಹಾಗೂ ಮಾತೃ ಮಂಡಳಿಯ ಸದಸ್ಯರಿಗೆ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿ ಬಿಂಬಿಸುವ ವಿವಿಧ ರೀತಿಯ ಆಟೋಟ ಹಾಗೂ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕವಿತಾ ದೇವದಾಸ್ ಅರ್ಕುಳ ಇವರು ವಹಿಸಿದ್ದರು.ವೇದಿಕೆಯಲ್ಲಿ ಉದ್ಯಮಿ ದಾಮೋದರ್ ತುಂಗಾ ಬೆಂಜನ ಪದವು, ನವೋದಯ ಮಿತ್ರ ಕಲಾ ವೃಂದದ ಸಂಚಾಲಕ ದಾಮೋದರ ನೆತ್ತರಕೆರೆ, ಅಧ್ಯಕ್ಷ ಸಂತೋಷ್ ನೆತ್ತರಕೆರೆ, ಮಾತೃ ಮಂಡಲಿಯ

ಸಂಚಾಲಕಿ ಲಲಿತಾ ಸುಂದರ್, ಅಧ್ಯಕ್ಷೆ ಮಾಲತಿ ಚಂದ್ರಹಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರ್ಷ ಸ್ವಾಗತಿಸಿ, ಶಶಿಕಲಾ ಟೀಚರ್ ಹಾಗೂ ಚಾಂದಿನಿ ಧನ್ಯವಾದವಿತ್ತರು. ಜಯಂತಿ ವಿಶ್ವನಾಥ ಹಾಗೂ ವಿದ್ಯಾಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಗಮನ ಸೆಳೆದ 45 ಬಗೆಯ ತಿನಿಸುಗಳು.

ಆಟಿಡೊಂಜಿ ಗಮ್ಮತ್ ಕಾರ್ಯಕ್ರಮದ ಅಂಗವಾಗಿ ನೇತ್ರಾವತಿ ಮಾತೃ ಮಂಡಳಿಯ ಸದಸ್ಯರು ತಮ್ಮ ಕೈ ರುಚಿಯ ಸುಮಾರು 45 ಬಗೆಯ ಆಷಾಢ ಮಾಸದ ವಿಶೇಷ ಖಾದ್ಯ ತಯಾರಿಸಿ ತಂದಿದ್ದು ಮಧ್ಯಾಹ್ನ ಸಹಭೋಜನ ನಡೆಯಿತು.

Leave a Comment