ಫಾರಿನ್ ಎಣ್ಣೆ ಡೀಲರ್‌ಶೀಪ್ ಹೆಸರಲ್ಲಿ ಲಕ್ಷಾಂತರ ರೂ ವಂಚನೆ: ಕೇರಳ ಮೂಲದ ದಂಪತಿ ಬಂಧನ

Coastal Bulletin
ಫಾರಿನ್ ಎಣ್ಣೆ ಡೀಲರ್‌ಶೀಪ್ ಹೆಸರಲ್ಲಿ ಲಕ್ಷಾಂತರ ರೂ ವಂಚನೆ: ಕೇರಳ ಮೂಲದ ದಂಪತಿ ಬಂಧನ

ವಿದೇಶಗಳಿಂದ ಮದ್ಯ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುವ ವ್ಯವಹಾರ ನಡೆಸುವುದಾಗಿ ನಂಬಿಸಿ ಹೈದ್ರಾಬಾದ್ ಮೂಲದ ಉದ್ಯಮಿಗೆ ಲಕ್ಷಾಂತರ ರೂ.ವಂಚಿಸಿದ ಕೇರಳ ಮೂಲದ ದಂಪತಿ ಎಚ್‌ಎಎಲ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.  

ಕೇರಳ ಮೂಲದ ಸುಬೀಷ್ ಪಿ.ವಾಸು ಮತ್ತು ಆತನ ಪತ್ನಿ ಶಿಲ್ಪಾ ಬಾಬು ಬಂಧಿತರು ಎಂದು ತಿಳಿದುಬಂದಿದೆ. 

ಹೈದರಾಬಾದ್ ಮೂಲದ ಉದ್ಯಮಿ ಕೆ. ಆರ್.ಕಮಲೇಶ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


Leave a Comment