ಕೊಯಿಲ: ಸರ್ಕಾರಿ ಪ್ರೌಢಶಾಲೆಯಲ್ಲಿ ಕೆನರಾ ರೊಬೆಕೋ ಸಂಸ್ಥೆಯಿಂದ ಉಚಿತ ಸೈಕಲ್ ವಿತರಣೆ.

Coastal Bulletin
ಕೊಯಿಲ: ಸರ್ಕಾರಿ ಪ್ರೌಢಶಾಲೆಯಲ್ಲಿ ಕೆನರಾ ರೊಬೆಕೋ ಸಂಸ್ಥೆಯಿಂದ ಉಚಿತ ಸೈಕಲ್ ವಿತರಣೆ.

ಬಂಟ್ವಾಳ: ತಾಲ್ಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಅರ್ಹ 45 ಮಂದಿ ವಿದ್ಯಾರ್ಥಿಗಳಿಗೆ ಕೆನರಾ ರೊಬೆಕೋ ಸಂಸ್ಥೆ ವತಿಯಿಂದ ಸೋಮವಾರ ಉಚಿತ ಸೈಕಲ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೊಬೆಕೋ ಸಂಸ್ಥೆಯ ಮಂಗಳೂರು ವಿಭಾಗ ವ್ಯವಸ್ಥಾಪಕ ಮುರಳೀಧರ ಶೆಣೈ, ಅಧಿಕಾರಿ ರಾಜೇಶ್ ಅಂಚನ್, ಮುಖ್ಯಶಿಕ್ಷಕಿ ಸೌಮ್ಯಾ ಎಚ್. ಮತ್ತಿತರರು ಇದ್ದರು.

Leave a Comment