ಬಂಟ್ವಾಳ: ಜಿಲ್ಲೆಯಲ್ಲೇ ಅಪರೂಪ ಎಂಬಂತೆ ಒಂದು ಗ್ರಾಮದಲ್ಲಿ ಒಂದೇ ಹೆಸರು ಮತ್ತು ಒಂದೇ ದಿನ ಎರಡು ಕಂಬಳ ಕೂಟ ಇಲ್ಲಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿ ಮತ್ತು ಹೊಕ್ಕಾಡಿಗೋಳಿ ಕೊಡಂಗೆ ಎಂಬಲ್ಲಿ ಇದೇ 16ರಂದು ಶನಿವಾರ ಬೆಳಿಗ್ಗೆ ಆರಂಭಗೊಳ್ಳಲಿದೆ. ಹೊಕ್ಕಾಡಿಗೋಳಿ ಎಂಬಲ್ಲಿ ಮಹಿಷ ಮಧರ್ಿನಿ ಕಂಬಳ ಸಮಿತಿ ವತಿಯಿಂದ ರಶ್ಮಿತ್ ಶೆಟ್ಟಿ ಕೈತ್ರೋಡಿ ನೇತೃತ್ವದಲ್ಲಿ ಇದೇ 16ರಂದು ಬೆಳಿಗ್ಗೆ ಹೊನಲು ಬೆಳಕಿನ 'ವೀರ-ವಿಕ್ರಮ' ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ ಸಿಗಲಿದೆ. ಇನ್ನೊಂದೆಡೆ ಇಲ್ಲಿಗೆ ಸಮೀಪದ ಹೊಕ್ಕಾಡಿಗೋಳಿ ಕೊಡಂಗೆ ಎಂಬಲ್ಲಿ ಓಟದ ಕೋಣಗಳ ಯಜಮಾನ ಸಂದೀಪ್ ಶೆಟ್ಟಿ ಪೊಡುಂಬ ನೇತೃತ್ವದಲ್ಲಿ ಕೂಡಾ ಇದೇ 16ರಂದು ಬೆಳಿಗ್ಗೆ ಹೊನಲು ಬೆಳಕಿನ 'ವೀರ-ವಿಕ್ರಮ' ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ ಸಿಗಲಿದೆ.
ಈ ಎರಡೂ ಕಂಬಳ ಕೂಟ ಉದ್ಘಾಟನೆಯನ್ನು ಸ್ಥಳೀಯ ಪ್ರಸಿದ್ಧ ಪೂಂಜ ಶ್ರೀ ಪಂಚದುಗರ್ಾ ಪರಮೇಶ್ವರಿ ದೇವಸ್ಥಾನದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಇವರು ನೆರವೇರಿಸಲಿದ್ದಾರೆ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೊಕ್ಕಾಡಿಗೋಳಿ ಕೊಡಂಗೆ ನೂತನ ಕರೆ ಉದ್ಘಾಟಿಸುವರು ಎಂದು ಸಮಿತಿ ತಿಳಿಸಿದೆ.
ಕಂಬಳ ತಡೆಯಾಜ್ಞೆಗೆ ಹೈಕೋರ್ಟ್ ನಕಾರ:
ಇಲ್ಲಿನ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಕಂಬಳಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಮಾ.16ರಂದು ಸಂದೀಪ್ ಶೆಟ್ಟಿ ಪೊಡುಂಬ ನೇತೃತ್ವದ ಎರಡನೇ ಸಮಿತಿಗೆ ಕಂಬಳ ನಡೆಸಲು ಜಿಲ್ಲಾ ಕಂಬಳ ಸಮಿತಿ ದಿನಾಂಕ ನೀಡಿದೆ. ಆದುದರಿಂದ ಮೊದಲ ಸಮಿತಿ ನಡೆಸುವ ಕಂಬಳಕ್ಕೆ ತಡೆಯಾಜ್ಞೆ ನಿಡಬೇಕು ಎಂದು ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ ಶೆಟ್ಟಿ ಮುಚ್ಚೂರು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಶಂಕರ್ ಮಗದುಮ್ ಏಕ
ಸದಸ್ಯ ಪೀಠವು ದಿನಾಂಕ ನಿಗದಿಗೊಳಿಸಲು ಜಿಲ್ಲಾ ಸಮಿತಿಗೆ ಇರುವ ಅಧಿಕಾರ ವ್ಯಾಪ್ತಿ ಬಗ್ಗೆ ಪ್ರಶ್ನಿಸಿದೆ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದ ಕಾರಣ ಕಂಬಳಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ರಿಟ್ ಅರ್ಜಿ ಮುಂದೂಡಿದೆ. ಈ ಕಂಬಳ ಸಮಿತಿ ಪರವಾಗಿ ವಕೀಲ ಅರುಣ್ ಶ್ಯಾಂ ಮತ್ತು ರಕ್ಷಿತ್ ಕುಮಾರ್ ನಾರಾವಿ ವಾದ ಮಂಡಿದ್ದರು ಎಂದು ಸಮಿತಿ ತಿಳಿಸಿದೆ.
ಕಂಬಳ ಕೋಣಗಳ ಮಾಲೀಕರು, ತೀರ್ಪುಗಾರರಿಗೆ ವಿನಂತಿ:
ಈ ನಡುವೆ ಹೊಕ್ಕಾಡಿಗೋಳಿ ಕೊಡಂಗೆಯಲ್ಲಿ ಸಂದೀಪ್ ಶೆಟ್ಟಿ ಪೊಡುಂಬ ನೇತೃತ್ವದ ಸಮಿತಿಗೆ ಮಾ.16ರಂದು ಕಂಬಳ ನಡೆಸಲು ಅಧಿಕೃತವಾಗಿ ದಿನಾಂಕ ನೀಡಲಾಗಿದೆ. ಆದುದರಿಂದ ಕಂಬಳ ಕೋಣದ ಯಜಮಾನರು ಮತ್ತು ತೀರ್ಪುಗಾರರು ಸಹಿತ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಈ ಕಂಬಳ ಕುಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಪ್ರಕಟಣೆ ಮೂಲಕ ಮೂಲಕ ವಿನಂತಿಸಿಕೊಂಡಿದ್ದಾರೆ.









