ಬಂಟ್ವಾಳ: ರಾಜ್ಯದಲ್ಲೇ ಅಪರೂಪ ಎಂಬಂತೆ ಒಂದು ತಿಂಗಳ ತನಕ ವಾರ್ಷಿಕ ಜಾತ್ರೆ ನಡೆಯುವ ಇಲ್ಲಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಬಾರಿ 29 ದಿನಗಳ ವಾರ್ಷಿಕ ಜಾತ್ರೆಗೆ ಶುಕ್ರವಾರ ಸಾಂಪ್ರದಾಯಿಕ ರೀತಿಯಲ್ಲಿ ಚಾಲನೆ ನೀಡಲಾಯಿತು.
ಇಲ್ಲಿನ ಸಂಪ್ರದಾಯದಂತೆ ದೈವ ವೇಷಧಾರಿ ಪಾತ್ರಿ ವಾಲಗ ಊದುವ ಶೇರಿಗಾರನ ಕಿವಿಯಲ್ಲಿ ಗುಟ್ಟಾಗಿ `29 ಪೋಪಿನಾನಿ ಐತಾರ ದಿನತ್ತಾನಿ ಆರಡ' ಎನ್ನುವ ಮೂಲಕ ಈ ಬಾರಿ 29 ದಿನಗಳ ವಾರ್ಷಿಕ ಜಾತ್ರೆ ಎಂದು ಪ್ರಕಟಿಸಿದರು.
ಐದು ದಿನ ಚೆಂಡು:
ಇದೇ 15ರಂದು ಜಾತ್ರೆ ಆರಂಭಗೊಂಡು ಏ. 6 ರಂದು ಮೊದಲ ಚೆಂಡು, ಏ.7 ರಂದು ಎರಡನೇ ಚೆಂಡು, ಏ.8
ರಂದು ಮೂರನೇ ಚೆಂಡು, ಏ.9 ರಂದು ನಾಲ್ಕನೇ ಚೆಂಡು, ಏ. 10 ರಂದು ಕಡೇ ಚೆಂಡು, ಏ. 11ರಂದು ಮಹಾ ರಥೋತ್ಸವ ಮತ್ತು ಏ. 12ರಂದು ಅವಭೃತ ಸ್ನಾನ (ಆರಡ) ನಡೆಯಲಿದೆ.
ಈ ನಡುವೆ ಪ್ರತೀ 5 ದಿನಕ್ಕೊಮ್ಮೆ ದಂಡಮಾಲೆ, ಕೋಳಿ ಗುಂಟ, ಜಾತ್ರೆ ಬಳಿಕ ಕೊಡಮಣಿತ್ತಾಯಿ-ಉಳ್ಳಾಕ್ಲು -ಮಗೃಂತಾಯಿ-ಬಂಟ ಪರಿವಾರ ದೈವಗಳ ನೇಮೋತ್ಸವ ನಡೆಯುವುದು ಇಲ್ಲಿನ ವಿಶೇಷತೆ.









