ಮಂಗಳೂರು :ಕೆನರಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 'ಸೃಜನಾ 2024' ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸ್ವಯಂಸೇವಕರಿಗಾಗಿ ನಡೆಸುವ ಸ್ಪರ್ಧಾವಳಿಗೆ ಮೇರಮಜಲು ಗ್ರಾ ಪಂ ಅಧ್ಯಕ್ಷ ಸತೀಶ ನಾಯ್ಗ ಕೊಡ್ಮಣ್ ಕೋಡಿ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ರಾಮಕೃಷ್ಣ ಮಿಷನ್- ಸ್ವಚ್ಛ ಮಂಗಳೂರು ಅಭಿಯಾನದ ಸಂಯೋಜಕರಾದ ಶ್ರೀ ರಂಜನ್ ಬೆಳ್ಳಿರ್ಪಾಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸೇವೆ ಎಂಬುದು ಸುಂದರವಾದ ಪರಿಕಲ್ಪನೆ. ಉಚಿತ ಸೇವೆ ಮಾಡಿದಷ್ಟು ಸಂತೋಷ ಉಂಟಾಗುವುದು. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಯೋಜನೆ, ಯೋಚನೆಗಳನ್ನು ಬದಲಾಯಿಸಿ. ಆಗ ಯಶಸ್ಸಿನ ಗಂಥವ್ಯವನ್ನು ತಲುಪಬಹುದು. ಸಾರ್ವಜನಿಕ ಜೀವನಕ್ಕೆ ಬೇಕಾದ ಪ್ರಮುಖ ಅಂಶ ಸಂವಹನ ಮತ್ತು ಸೃಷ್ಟಿ ಶೀಲತೆ. ಇದು ಮುಂದೆ ಉದ್ಯೋಗಕ್ಕೆ ಹೋದಾಗಲೂ ಅಗತ್ಯವಾಗಿದೆ ಎಂದು ಹೇಳಿದರು. ಅಲ್ಲದೆ ತನ್ನ ಮಾತನಾಡುವ ಆಯಾಮ ತೆರೆದುಕೊಂಡದ್ದು ಅದಕ್ಕೆ ಬೀಜಾಂಕುರವಾದದ್ದು ಕಾಲೇಜು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಎಂಬುದನ್ನು ಸ್ಮರಿಸಿದರು.
ಕೆನರಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎಂ ರಂಗನಾಥ ಭಟ್
ಅಧ್ಯಕ್ಷತೆ ವಹಿಸಿದ್ದು ಎನ್ ಎಸ್ ಎಸ್ ಶಿಬಿರವು ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಬಹಳ ಪ್ರಯೋಜನಕಾರಿ ಎಂದರು. ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಶುಭ ಹಾರೈಸಿದರು. ರಾಸೇಯೋ ಅಧಿಕಾರಿ ಸೀಮಾ ಪ್ರಭು ವರದಿ ವಾಚಿಸಿದರು. ಸಿಬ್ಬಂದಿ ಕ್ಷೇಮ ಪಾಲನಾ ಕಾರ್ಯದರ್ಶಿ ಡಾ. ಕಲ್ಪನಾ ಪ್ರಭು ಸ್ವಾಗತಿಸಿ, ರಾ ಸೇ ಯೋ ಅಧಿಕಾರಿ ಎಂ ಕೀರ್ತನ ಭಟ್ ವಂದಿಸಿದರು. ಸಾರಿಕಾ ನಿರೂಪಿಸಿದರು. ಸಂಚಾಲಕ ಸಿ ಎ ಎಂ ಜಗನ್ನಾಥ ಕಾಮತ್, ವ್ಯವಸ್ಥಾಪಕ ಕೆ ಶಿವಾನಂದ ಶೆಣೈ, ಆಡಳಿತ ಮಂಡಳಿ ಪದಾಧಿಕಾರಿ ಅಶ್ವಿನಿ ಕಾಮತ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ್ ಶೇಟ್, ಸಹ ಸಂಯೋಜನಾಧಿಕಾರಿ ಶುಭಂ ಕುಲಾಲ್ ಉಪಸ್ಥಿತರಿದ್ದರು.









