Coastal Bulletin

ಪುತ್ತೂರು: ಕಬಕ ಗ್ರಾಮ ಪಂಚಾಯಿತಿ ನಡೆಸುತ್ತಿದ್ದ ಸ್ವಾತಂತ್ರ್ಯ ರಥಕ್ಕೆ ತಡೆಯೊಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಠಾಣಾ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸ್ವಾತಂತ್ರ್ಯ ರಥ ಸಂಚಾರಕ್ಕೆ ಅಡ್ಡಿಪಡಿಸಿದ ಕಿಡಿಗೇಡಿಗಳ ಕೃತ್ಯದ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿತ್ತು.ರಥದಲ್ಲಿ ಸಾವರ್ಕರ್ ಫೋಟೋ ಬಳಸಿದ್ದನ್ನು ವಿರೋಧಿಸಿದ ಮೂವರು ಎಸ್ ಡಿ ಪಿ ಐ ಕಾರ್ಯಕರ್ತರಾದ ಕೆ. ಅಜೀಜ್ , ಶಮೀರ್, ಅಬ್ದುಲ್ ರೆಹಮಾನ್ ರನ್ನು ಪೊಲೀಸರು ವಶಕ್ಕೆ ಪಡೆದು  ವಿಚಾರಣೆ ನಡೆಸುತ್ತಿದ್ದಾರೆ. 

 ಘಟನೆ

ಹಿನ್ನೆಲೆ

ಇಂದು ಬೆಳಗ್ಗೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಬಕ ಗ್ರಾಮ ಪಂಚಾಯತಿ ವತಿಯಿಂದ ಸಂಚರಿಸುವ ಸ್ವಾತಂತ್ರ್ಯ ರಥಕ್ಕೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವರ್ಕರ್, ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಫೋಟೊಗಳನ್ನು ಅಳವಡಿಸಲಾಗಿತ್ತು.ರಥ ಹೊರಡುತ್ತಿದ್ದಂತೆ ಧಿಕ್ಕಾರ  ಕೂಗಿದ ಎಸ್ಡಿಪಿಐ ಕಾರ್ಯಕರ್ತರು,ಸಾವರ್ಕರ್ ಫೋಟೊ ತೆಗೆಯುವಂತೆ ಆಗ್ರಹಿಸಿ ರಥಕ್ಕೆ ತಡೆ ಒಡ್ಡಿದ್ದರು.

Leave a Comment