Coastal Bulletin

ಸಿದ್ದಕಟ್ಟೆ: ಇಂಡಿಯನ್ ಕ್ಯಾನ್ಸರ್ ಸೊಸೈಟಿ , ಬಂಟರ ಸಂಘ ಸಿದ್ಧಕಟ್ಟೆ ವಲಯ ಹಾಗೂ ರೋಟರಿ ಕ್ಲಬ್ ಬಿಸಿರೋಡ್ ಸಿಟಿ, ರೋಟರಿ ಕ್ಲಬ್ ಲೊರಟ್ಟೋ, ರೋಟರಿ ಕ್ಲಬ್ ಮೊಡಂಕಾಪು, ,ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಸಿದ್ದಕಟ್ಟೆ, ಕ್ಯಾಥೋಲಿಕ್ ಸಭಾ ಸಿದ್ದಕಟ್ಟೆ ಮುಂತಾದ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಜು.17 ರಂದು ಆದಿತ್ಯವಾರ,ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇದರ ತಜ್ಞ ವೈದರ ಮಾರ್ಗದರ್ಶನದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ತಿಳುವಳಿಕೆ ನೀಡುವ ಶಿಬಿರವು ಸಿದ್ದಕಟ್ಟೆಯ ಸೈನ್ಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮವು ಬೆಳಿಗ್ಗೆ 9.30 ರಿಂದ 12ರವರೆಗೆ ನಡೆಯಲಿದ್ದು, ಈ ಶಿಬಿರದಲ್ಲಿ ಸ್ತ್ರೀಯರ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ,

ಸ್ತ್ರೀಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ತಪಾಸಣೆ ಮತ್ತು ವಿಡಿಯೋ ಪ್ರದರ್ಶನ ಮೂಲಕ ಮಾಹಿತಿ ನೀಡಲಿದ್ದಾರೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment