ಬಂಟ್ವಾಳ :ದ ಕ ಜಿ ಪ ಹಿ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲು ಇಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶಾಲಾ ಧ್ವಜಾರೋಹಣವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಉದಯಕುಮಾರ್ ಜ್ಯೋತಿಗುಡ್ಡೆ ನೆರವೇರಿಸಿದರು.
ಕ್ರೀಡಾಂಗಣದಲ್ಲಿ ಮಕ್ಕಳ ಆಕರ್ಷಕ ಕವಾಯತು ಪ್ರದರ್ಶನ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮ ವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಭಾರತಿ ಶೇಷಪ್ಪ ಜ್ಯೋತಿ ಬೆಳಗಿಸಿ ಮಾತನಾಡುತ್ತಾ, ಶಾಲಾ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಪ್ರಕ್ರಿಯೆ, ಹಾಗೂ ಮಕ್ಕಳ ಸುಪ್ತಪ್ರತಿಭೆಗಳನ್ನು ಉದ್ದಿಪನ ಗೊಳಿಸುವ ಪ್ರಕ್ರಿಯೆಯೇ ಶಿಕ್ಷಣ ಹಾಗೂ ಪಠ್ಯದ ಜೊತೆ ಪಠ್ಯೇ ತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ದೊರೆತಾಗ ಸಮಾಜದ ಮುಖ್ಯ ವಾಹಿನಿಗೆ ಬರಲು ವಿದ್ಯಾರ್ಥಿಗಳಿಗೆ ಸಹಾಯಕ ವಾಗುವುದು ಎಂದು ಅಭಿಪ್ರಾಯಪಟ್ಟರು.
ಶಾಲಾ ನಾಯಕಿ ಕು. ವೈಷ್ಣವಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಡುಗೈ ದಾನಿ ಶ್ರೀ ಅನಿಲ್ ಪಂಡಿತ್ ರವರು ಮಾತನಾಡುತ್ತಾ, ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ ಆದುದರಿಂದ ಮನೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಅತಿಥಿಗಳಾಗಿ ದಿನೋದಯ ಆಚಾರ್ಯ, ಸೌಮ್ಯ ಪೆರಿಯೋಡಿ,
ಜಮೀಳಾ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಹಾಗೂ ಪೋಷಕ ರಿಗೆ ನಡೆಸಿದ್ದ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ವರ್ಗಾವಣೆಯಾಗಿ ತೆರಳಿದ್ದ ಶಿಕ್ಷಕಿಯರಾದ ಡಯಾನಾ ರೋಡ್ರಿಗಸ್, ದೇವಿ, ಅತಿಥಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಜಯಶ್ರೀ, ಭವ್ಯ ಜ್ಯೋತಿ, Idbi ಶಿಕ್ಷಕಿಯರಾ ಪ್ರಮೀಳಾ, ರೇಖಾ,ಮಮತಾ ಹಾಗೂ 8 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕು. ಮೇಘಶ್ರೀ ಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು. ಮುಖ್ಯ ಶಿಕ್ಷಕಿಯಾದ ಕಲ್ಯಾಣಿ ಯವರು ಸ್ವಾಗತಿಸಿ ಶಾಲಾ ಚಟುವಟಿಕೆಗಳ ಬಗ್ಗೆ ವರದಿ ವಾಚಿಸಿದರು. ಶಿಕ್ಷಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.ಫ್ಲೇವಿ ಪ್ರೀತಿ ಫೆರ್ನಾಂಡಿಸ್ ವಂದಿಸಿದರು. ಶಾಲಾ ದತ್ತು ಸಂಸ್ಥೆಯಾದ ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಧುಸೂಧನ ಶೆಣೈ, ಶಿಕ್ಷಕಿ ವೇದಾವತಿ, ಎಲ್ಲಾ ಎಸ್ ಡಿ ಎಂ ಸಿ ಸದಸ್ಯರು ಸಹಕರಿಸಿದರು. ಮಕ್ಕಳಿಂದ ಆಕರ್ಷಕ ವಿವಿಧ ವಿನೋದಾವಳಿಗಳು ನಡೆಯಿತು.









