ಬಂಟ್ವಾಳ:ಫೆ. 14: ಪೊಳಲಿ ಎಸ್.ಆರ್.ಹಿಂದೂ ಫ್ರೆಂಡ್ಸ್‌ನದಶಮಾನೋತ್ಸವ ಸಮಾರಂಭವು ನಡೆಯಲಿದ್ದು ಅ ಪ್ರಯುಕ್ತ ಸತ್ಯನಾರಾಯಣ ಪೂಜೆ, ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಫೆ. 15ರಂದು ಶನಿವಾರ ಪೊಳಲಿ ದೇವಸ್ಥಾನದ ಬಳಿ ನಡೆಯಲಿದೆ.
ಪೊಳಲಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕೇಸರ ಡಾ। ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಭುವನೇಶ್ ಪಚ್ಚಿನಡ್ಕ ಪ್ರಸಾದ್ ಕುಮಾರ್ ರೈ ಸುಕೇಶ್ ಚೌಟ, ಪುಲಸ್ಟ್ರಾ ರೈ, ಅನಂತ ಪದ್ಮನಾಭ ಭಟ್, ಜಯರಾಮಕೃಷ್ಣ ಪೊಳಲಿ, ಉಮೇಶ್ ಸಾಲ್ಯಾನ್ ಭಾಗವಹಿಸಲಿದ್ದಾರೆ.
ಬೆಳಗ್ಗೆ 9.30ಕ್ಕೆ ಪೊಳಲಿ ದೇವಸ್ಥಾನದ ಸರ್ವಮಂಗಳ ಸಭಾಂಗಣದಲ್ಲಿ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ಪೊಳಲಿ ಚೆಂಡಿನ ಗದ್ದೆಯಲ್ಲಿ ಧಾರ್ಮಿಕ ಸಭೆಯಲ್ಲಿ ಪೊಳಲಿ ರಾಮಕೃಷ್ಣ
ತಪೋವನದ ಸ್ವಾಮಿ ವಿವೇಕಚೈತನ್ಯಾನಂದಜಿ ಆಶೀರ್ವಚನ ನೀಡಲಿದ್ದು, ಶಾಸಕ ರಾಜೇಶ್ ನ್ಯಾಕ್, ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್,
ಉಪನ್ಯಾಸಕ ಡಾ| ಅರುಣ್ ಉಳ್ಳಾಲ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಸಾಧಕರಾದ ಡಾ|ಪಿ.ಎಂ.ಪುಷ್ಪರಾಜ್ ಶೆಟ್ಟಿ ಸುಬ್ರಾಯ ಕಾರಂತ್, ಶಾರದಾ ಯು.ಆರ್., ಭೂಷಣ್ ಪೂಜಾರಿ, ಮಾನ್ಯ ದೇವಾಡಿಗ ಅವರನ್ನು ಸಮ್ಮಾನಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.














