ಬಂಟ್ವಾಳ :ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ಧಿಗಾಗಿ ಶತಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆ ಉತ್ಸವ ವು ಮಾ.1ರಿಂದ 7ರವರೆಗೆ ವಿವಿಧ ವೈದಿಕ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಹೇಳಿದರು.
ಅವರು ಫೆ. 14ರಂದು ಶುಕ್ರವಾರ ಸಂಜೆ ದೇವಳದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಶ್ರೀ ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಪರಿಹಾರವಾಗಿ ಮಾ.5ರಂದು ಸಾವಿರ ಸೀಮೆಯ ಭಕ್ತಾದಿಗಳು ಸೇರುವಿಕೆಯಲ್ಲಿ ಶತಚಂಡಿಕಾಯಾಗ ಹಾಗೂ ಮಾ.6ರಂದು ಸೇವಾ ರೂಪದಲ್ಲಿ ದೊಡ್ಡರಂಗಪೂಜೆ ನಡೆಯಲಿದೆ ಎಂದರು.
ಮಾ.1ರಂದು ಶನಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ ಸಪ್ತಸತಿ ಪಾರಾಯಣ ಆರಂಭ, ನವಾಕ್ಷರೀ ಜಪ, 2ರಂದು ಬೆಳಿಗ್ಗೆ ಪಾರಾಯಣ, ನವಾಕ್ಷರೀ ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯ ಸಹಸ್ರನಾಮ ಹೋಮ ಸಾಯಂಕಾಲ ಶ್ರೀಚಕ್ರಪೂಜೆ, 3ರಂದು ಪಾರಾಯಣ, ನವಾಕ್ಷರೀ ಜಪ. ನಮ ಹೋಮ.,4ರಂದು ಕಾಳಿ ಸಹಸ್ರನಾಮಹೋಮ, ಸಹ ಪಾರಾಯಣ ಆರಂಭ, ನವಾಕ್ಷರೀ ಜಪ, ಸಾಯಂಕಾಲ ಮಂಟಪ ಸಂಸ್ಕಾರ, ಪ್ರಾಸಾದ ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ಅಗ್ನಿ ಜನನ ಸಂಸ್ಕಾರ, 5ರಂದು ಬುಧವಾರ ಶತಚಂಡಿಕಾಯಾಗ, 6ರಂದು ದೊಡ್ಡ ರಂಗಪೂಜೆ ಉತ್ಸವ ಸಂಜೆ ದೊಡ್ಡರಂಗಪೂಜೆ 8.30ರಿಂದ ಬಲಿ ಉತ್ಸವ,
ಬೆಳ್ಳಿ ರವ ಚಂದ್ರಮಂಡಲ ರಥ, ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದರು. ಮಾ. 7ರಂದು ಕಲಶಪೂಜೆ, ಗಣಪತಿಹೋಮ ಸೋಮ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ ಎಂದು ವಿವರ ನೀಡಿದರು.
ಶತಚಂಡಿಕಾಯಾಗದ ಪೂರ್ವಸಿದ್ಧತೆಯ ಬಗ್ಗೆ ಸಾವಿರ ಸೀಮೆಯ ಸಭೆಯನ್ನು ಈಗಾಗಲೇ ನಡೆಸಲಾಗಿದೆ. ಶತಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ೧೫ ಎಕ್ರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲು ತೀರ್ಮಾನಿಸಲಾಗಿದೆ.
ಶತಚಂಡಿಕಾಯಾಗಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಚೆಂಡಿನಗದ್ದೆಯಲ್ಲಿ ಮಾಡಲಾಗುವುವುದು. ಹಾಗೂ ಶತಚಂಡಿಕಾಯಾಗಕ್ಕೆ ಬರುವ ಭಕ್ತಾದಿಗಳಿಗೆ ಬೆಳಿಗ್ಗಿನ ಉಪಹಾರದ ವ್ಯವಸ್ಥೆ ಇದೆ . ಶ್ರೀ ದೇವಳಕ್ಕೆ ಬರುವ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ವ್ಯವಸ್ಥಿತವಾಗಿ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಯಕ್ರಮ ಯಶ್ವಸಿಯಾಗಿ ನೆರೆವೇರಲು ಸಂಘ ಸ್ವಯಂ ಸೇವಕರು ತಮ್ಮ ತಂಡದ ಹೆಸರನ್ನು ನೋಂದಾಯಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮುಕ್ತೇಸರ ಅಮ್ಮುಂಜೆಗುತ್ತು ಡಾlಮಂಜಯ್ಯ ಶೆಟ್ಟಿ, ಅರ್ಚಕರಾದ ಪದ್ಮನಾಭ ಭಟ್,ಅನಂತಪದ್ಮನಾಭ ಭಟ್ ಉಪಸ್ಥಿತರಿದ್ದರು.














