ತುಂಬೆ: ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಅಶ್ರಯದಲ್ಲಿ 40ನೇ ರಕ್ತದಾನ ಶಿಬಿರ.

Coastal Bulletin
ತುಂಬೆ: ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಅಶ್ರಯದಲ್ಲಿ 40ನೇ ರಕ್ತದಾನ ಶಿಬಿರ.

ತುಂಬೆ: ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ತುಂಬೆ, ಸೇವಾ ಭಾರತಿ ಬಂಟ್ವಾಳ ತಾಲೂಕು ಮತ್ತು ಸೇವಾ ಜಾಗರಣ ತುಂಬೆ ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಮತ್ತು ವೆನ್ಲಾಕ್ ಸರಕಾರಿ ಮಂಗಳೂರು ಸಹಯೋಗದಲ್ಲಿ ಶ್ರೀ ಶಾರದಾ ಸಭಾ ಭವನ ತುಂಬೆಯಲ್ಲಿ 40ನೇ ರಕ್ತದಾನ ಶಿಬಿರ ಜು 13ರಂದು ರವಿವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಭಾಗವಹಿಸಿ, ಸೇವಾ ಭಾರತಿ, ಸೇವಾ ಜಾಗರಣ ಹಾಗೂ ಶಾರದಾ ಪ್ರತಿಷ್ಠಾನದ ಸಮಾಜ ಮುಖಿ ಕಾರ್ಯಗಳನ್ನು ಶ್ಲಾಘಿಸಿ, ನೂತನ ಶಾರದಾ ವಿಸ್ತೃತ ಕಟ್ಟಡಕ್ಕೆ ತಮ್ಮಿಂದಾದ ಅನುದಾನ ನೀಡುವುದಾಗಿ ತಿಳಿಸಿದರು. 

ಅತಿಥಿಗಳಾಗಿ ಆಗಮಿಸಿದ ಜಯರಾಮ ಪೂಜಾರಿ ಇರಾ. ಉಪಾಧ್ಯಕ್ಷರು ಶ್ರೀ ಗೋಕರ್ಣನಾಥ ಕೋ. ಆಪರೇಟಿವ್ ಬ್ಯಾಂಕ್, ರವಿರಾಜ್ ಬಿ ಸಿ ರೋಡ್, ಹಿಂದೂ ಮುಖಂಡರು, ಪ್ರವೀಣ್ ಕುಮಾರ್ ಕಾಣೆಮಾರ್ ತುಂಬೆ, ರಾಘವೇಂದ್ರ, ಕೆ.ಎಂ. ಸಿ ಆಸ್ಪತ್ರೆ ಅಧಿಕಾರಿ ಭಾಗವಹಿಸಿದ್ದರು. 

ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ ಬಂದ

ಅತಿಥಿಗಳನ್ನು ಸ್ವಾಗತಿಸಿ,ಪ್ರಸ್ತಾವಿಕವಾಗಿ ಮಾತನಾಡಿದರು.

ಗುರು ಪೂರ್ಣಿಮೆ ಪ್ರಯುಕ್ತ ನಮ್ಮ ಊರಿನ ಹಿರಿಯರು, ವೈದ್ಯರಾದ ಡಾ. ವಿಠಲ್ ದಾಸ್ ಶೆಟ್ಟಿ ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು. 

ಸುಮಾರು 125ಕ್ಕೂ ಅಧಿಕ ಮಂದಿ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು. ಒಟ್ಟು 60ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಈ ಸಂಧರ್ಭದಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ. ತುಂಬೆ ಇದರ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಉಪಾಧ್ಯಕ್ಷೆ ಶೋಭಾ ಗೋಪಾಲ್ ಮೈಂದನ್, ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ರಾಘವ ಬಂಗೇರ ಪೆರ್ಲಬೈಲ್, ಉಪಸ್ಥಿತರಿದ್ದರು. ಸುಶಾನ್ ಬೊಳ್ಳಾರಿ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ಕಜೆಕಂಡ ವಂದಿಸಿದರು.

Leave a Comment