ಬಂಟ್ವಾಳ :ಶ್ರೀ ಸಾಯಿ ಕಿಡ್ಸ್ ಜೋನ್ ವಿದ್ಯಾಸಂಸ್ಥೆಗಳು ವಿವೇಕ ನಗರ ಬಿ ಸಿ ರೋಡ್ ಇಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಲೋಕೇಶ್ ಎಂ ಎಸ್ .ಚೆಕಿಂಗ್ ಸರ್ವೇಯರ್ ಎ ಡಿ ಎಲ್ ಆರ್ ಆಫೀಸ್ ಬಂಟ್ವಾಳ ಇವರು ಶಾಲಾ ವಠಾರದಲ್ಲಿ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪರಿಸರವೇ ಮನುಷ್ಯನ ಉಸಿರು ಮರಗಳು ಪರಿಸರದ ಜೀವಾಳ,ಪರಿಸರದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಸಭೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ತೇಜಸ್ವಿನಿ ಪೂಜಾರಿ, ಉಪಾಧ್ಯಕ್ಷರಾದ ಸುಂದರ್ ಎನ್, ಕೋಶಾಧ್ಯಕ್ಷರಾದ ಜಯಶ್ರೀ ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ .ಆಡಳಿತ ಮಂಡಳಿ ಸದಸ್ಯರಾದ ರಾಜೇಶ್ ಅಮೀನ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ
ಕುಮಾರಿ ಆಲಿಶಾ ಮೋನಿಕಾ ಪರಿಸರದ ಬಗ್ಗೆ ಮಾತನಾಡಿದರು.ವಿದ್ಯಾರ್ಥಿಗಳಾದ ಲವಿಶ್ ಜೆ ಕೊಡಿ ಯಡ್ಕ ಸ್ವಾಗತಿಸಿ, ಅನ್ವಿ ಆಳ್ವ ವಂದಿಸಿ, ಕೃತಿ ಡಿ. ಬಿ ಕಾರ್ಯಕ್ರಮ ನಿರೂಪಿಸಿದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.













