ಬಂಟ್ವಾಳ: ಮನೆಗೆ ನುಗ್ಗಿ ವಿವಾಹಿತ ಮಹಿಳೆಯನ್ನು ಬೆದರಿಸಿ ಅತ್ಯಾಚಾರ ಮಾಡಿದ ಪ್ರಕರಣ ಬಂಟ್ವಾಳದ ತಲಪಾಡಿಯಲ್ಲಿ ನಡೆದಿದ್ದು ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಆರೋಪಿ ಮೊಹಮ್ಮದ್ ಅಯ್ಯೂಬ್ ಎಂಬಾತನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಿ.ಸಿ.ರೋಡಿನ ತಲಪಾಡಿಯ ವಿವಾಹಿತ ಮಹಿಳೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮೊಹಮ್ಮದ್ ಅಯ್ಯೂಬ್ ಎಂಬಾತನು ಪರಿಚಯ ಮಾಡಿಕೊಂಡಿದ್ದು, ನಂತರ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು, ಮಹಿಳೆಗೆ ಕರೆ ಮಾಡಿದ್ದಾನೆ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ಮದುವೆಯಾಗುವಂತೆ ಪೀಡಿಸಿದ್ದಾನೆ. ಈ ಬಗ್ಗೆ ಮಹಿಳೆ ನಿರಾಕರಿಸಿದರೂ ಬೆದರಿಕೆ ಹಾಕುತ್ತಿದ್ದನು.
ಇತ್ತೀಚಿಗೆ ಮಹಿಳೆ ಬಿ.ಸಿ.ರೋಡ್ ಪೇಟೆಯ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಾಗ ಮೊಹಮ್ಮದ್ ಅಯ್ಯೂಬ್ ತನ್ನ ಕಾರಿನಲ್ಲಿ ಬಂದು ಒತ್ತಾಯಿಸಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಪೇಟೆಗೆ ಬಿಡುತ್ತೇನೆ ಎಂದು ಹೇಳಿ, ಮಂಗಳೂರಿನ ವಿವಿಧ ಕಡೆ ಸುತ್ತಾಡಿಸಿ ಮೊಬೈಲ್ ನಲ್ಲಿ ಪೋಟೋಗಳನ್ನು ತೆಗೆದು ಬಳಿಕ ತಲಪಾಡಿಯಲ್ಲಿ ಬಿಟ್ಟುಹೋಗಿದ್ದ.
ಆದರೆ ಈ ವಿಚಾರವನ್ನು ಯಾರಲ್ಲಿಯೂ ತಿಳಿಸದಂತೆ, ಹೇಳಿದರೆ ನಿನಗೆ ತೊಂದರೆಯಾದೀತು ಎಂದು ಬೆದರಿಸಿದ್ದಾನೆ. ಮಾತ್ರವಲ್ಲ, ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಅ ಬಳಿಕ ಮಾರ್ಚ್‌ನಲ್ಲಿ ಮೊಹಮ್ಮದ್ ಅಯ್ಯೂಬ್ ಮಹಿಳೆಯ ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ಗಮನಿಸಿ ಮನೆಗೆ ಬಂದು ಅತ್ಯಾಚಾರ ಮಾಡಿದ್ದಾನೆ. ಈ ವಿಚಾರ ಹೊರಗೆ ತಿಳಿಸಿದರೆ, ತನ್ನಲ್ಲಿದ್ದ ಮೊಬೈಲ್ ಪೋಟೋಗಳನ್ನು ವೈರಲ್ ಮಾಡುವುದಾಗಿಯೂ ಬೆದರಿದ್ದಾನೆ.
ಸದ್ಯ ಮೊಹಮ್ಮದ್ ಅಯ್ಯೂಬ್ ಅವನ ಉಪಟಳ ತಾಳಲಾರದೆ, ಮನೆಯವರಿಗೆ ತಿಳಿಸಿ ಮಹಿಳೆ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತ ಮಹಿಳೆ ದೂರಿನಂತೆ ಆರೋಪಿಯನ್ನು ಬಂಧಿಸಿಲಾಗಿದೆ.















