ಬಂಟ್ವಾಳ :ಹಿರಿಯ ನಾಗರಿಕರಿಗೆ ಸ್ಪೆಷಲ್ ವಾರ್ಡ್ ಸೌಲಭ್ಯ ಕಲ್ಪಿಸಲು ಆರೋಗ್ಯ ಸಚಿವರಿಗೆ ಮನವಿ

Coastal Bulletin
ಬಂಟ್ವಾಳ :ಹಿರಿಯ ನಾಗರಿಕರಿಗೆ ಸ್ಪೆಷಲ್ ವಾರ್ಡ್ ಸೌಲಭ್ಯ ಕಲ್ಪಿಸಲು ಆರೋಗ್ಯ ಸಚಿವರಿಗೆ ಮನವಿ

ಬಂಟ್ವಾಳ: ಆಯುಷ್ಮಾನ್ ಭಾರತ್ ಹಾಗೂ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಡಿ ಆಸ್ಪತ್ರೆಗಳಿಗೆ ದಾಖಲಾಗುವ ಹಿರಿಯ ನಾಗರಿಕರಿಗೆ ವಿಶೇಷ ವಾರ್ಡ್ (ಸ್ಪೆಷಲ್ ವಾರ್ಡ್) ಸೌಲಭ್ಯ ಕಲ್ಪಿಸುವಂತೆ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ವತಿಯಿಂದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಾಮಾನ್ಯ ವಾರ್ಡ್‌ಗಳಲ್ಲಿ ದಾಖಲಾಗುವ ವಯೋವೃದ್ಧರಿಗೆ ಶೌಚಾಲಯ ಬಳಕೆ ಹಾಗೂ ಇತರ ವೈಯಕ್ತಿಕ ಕೆಲಸಗಳಿಗಾಗಿ ಓಡಾಡಲು ತೊಂದರೆಯಾಗುತ್ತದೆ. ಆದ್ದರಿಂದ ಹಿರಿಯ ನಾಗರಿಕರ ಅನುಕೂಲದ ದೃಷ್ಟಿಯಿಂದ ವಿಮಾ ಯೋಜನೆಯಡಿ ದಾಖಲಾಗುವವರಿಗೆ ವಿಶೇಷ ವಾರ್ಡ್ ಸೌಲಭ್ಯ ಒದಗಿಸಬೇಕು. ಈ ಸೌಲಭ್ಯವನ್ನು ಕೇವಲ ಬಿಪಿಎಲ್ ಪಡಿತರ ಚೀಟಿದಾರರಿಗೆ ಸೀಮಿತಗೊಳಿಸದೆ, ಎಲ್ಲಾ ಹಿರಿಯ ನಾಗರಿಕರಿಗೂ

ವಿಸ್ತರಿಸುವಂತೆ ಸರಕಾರದಿಂದ ಸೂಕ್ತ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಗೌರವಾಧ್ಯಕ್ಷ ಶೇಷಪ್ಪ ಮಾಸ್ಟರ್, ಕಾರ್ಯದರ್ಶಿ ಶ್ರೀನಿವಾಸ್ ಖಂಡಿಗ, ಸದಸ್ಯರಾದ ಶೀನ ಮೂಲ್ಯ ಅಲ್ಲಿಪಾದೆ ಹಾಗೂ ಲೋಕನಾಥ ದೇವಂದಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Leave a Comment