Coastal Bulletin

ಬಂಟ್ವಾಳ :ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 132ನೇ ಜನ್ಮದಿನಾಚರಣೆಯನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಅಣ್ಣು ಖಂಡಿಗ ದೀಪಾ ಬೆಳಗಿಸಿ ಅಂಬೇಡ್ಕರ್‌ರವರ ಜೀವನ ಚರಿತ್ರೆಯನ್ನು ಹಾಗೂ ಸಂವಿಧಾನದ ಬಗ್ಗೆ ಅವರ ಕಾಳಜಿಯನ್ನು ಸಭೆಯಲ್ಲಿ ವಿವರಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಜನಾರ್ಧನ ಚೆಂಡ್ತಿಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮಹಾಬಲ

ಬಂಗೇರ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್

ಗೌಡ, ಬಂಟ್ವಾಳ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷರಾದ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಮುಖಂಡರಾದ ರಾಜೀವ್ ಕಕ್ಯಪದವು, ಜಗನ್ನಾಥ ತುಂಬೆ, ವೆಂಕಪ್ಪ ಪೂಜಾರಿ, ದಯಾನಂದ ನೇರAಬೋಳ್, ಪದ್ಮನಾಭ ಮಡಿವಾಳ, ಜಗದೀಶ್ ಬಡ್ಡಕಟ್ಟೆ, ಪುರುಷೋತ್ತಮ ಮಂಡಾಡಿ, ಸತೀಶ್ ಅಮ್ಟಾಡಿ, ಅಮ್ಮು ಅರ್ಬಿಗುಡ್ಡೆ, ಚಿಕ್ಕ ಅರ್ಬಿಗುಡ್ಡೆ, ಲೋಕೇಶ್ ಕೃಷ್ಣಪುರ, ಬೋಜ ಪೂಜಾರಿ, ಹೊನ್ನಯ್ಯ ಪೂಜಾರಿ, ಇಕ್ಬಾಲ್ ಬಾಂಬಿಲ, ವಲಾರ್ ಬಡ್ಡಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Leave a Comment