Coastal Bulletin

ಬಂಟ್ವಾಳ : ಚಿಕ್ಕ ಮಕ್ಕಳಿಗೆ ಈ ದೇಶದ ಸೈನ್ಯದ ಬಗ್ಗೆ ಅಭಿಮಾನ ಮೂಡಿಸಿ, ಮಾಹಿತಿ ನೀಡಿದಾಗ ಮುಂದೆ ದೇಶ ಸೇವೆಯ ಜಾಗೃತಿ ಮೂಡುತ್ತದೆ. ದೇಶವನ್ನು ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ನಮ್ಮ ಯುವಕರು ಸೈನ್ಯಕ್ಕೆ ಸೇರಿ ದೇಶ ಸೇವೆಯಲ್ಲಿ ತೊಡಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು

ಅವರು ಅಮ್ಮುಂಜೆಯ ವೀರಯೋಧ ಯಾದವ ಫ್ರೆಂಡ್ಸ್ (ರಿ) ಹಾಗೂ ಮಹಿಳಾ ಘಟಕದ "ವಿಂಶತಿ ಸಂಭ್ರಮ"ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದರು.

ಅಧ್ಯಕ್ಷತೆ ವಹಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಯೋಧರ ನೆನಪಿಗಾಗಿ ಸಂಸ್ಥೆಯನ್ನು ಕಟ್ಟಿ, ಯೋಧರನ್ನು ಹಾಗೂ ಸೇನೆಗೆ ಸೇರುವವರನ್ನು ನಿರಂತರ ಪ್ರೋತ್ಸಾಹಿಸುತ್ತಿರುವ ಈ ಸಂಘಟನೆಯು 20ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ಪ್ರೇರಣಾದಯಕವಾಗಿದೆ ಎಂದರು.

ಸಂದರ್ಭದಲ್ಲಿ ಮಾಜಿ ತಾ. ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕ್ಯಾ. ಬ್ರಿಜೇಶ್ ಚೌಟ, ಡಾ ಎ ಮಂಜಯ್ಯ ಶೆಟ್ಟಿ, ಡಿ ಎ ನಾಗೇಶ್ ರಾವ್, ಸೋಮಶೇಖರ್ ಶೆಟ್ಟಿ ಅಮ್ಮುಂಜೆಗುತ್ತು, ಜೀವರಾಜ್ ಶೆಟ್ಟಿ ಅಮ್ಮುಂಜೆಗುತ್ತು, ವಾಮನ ಆಚಾರ್ಯ, ಚಂದ್ರಹಾಸ ಪಲ್ಲಿಪಾಡಿ, ಡಿ ಅಬ್ದುಲ್ ಖಾದರ್ ದೊಂಪ, ಉಮೇಶ್ ಸಾಲಿಯಾನ್ ಬೆಂಜನಪದವು, ಚಂದ್ರಹಾಸ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment