ಬಂಟ್ವಾಳ :ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಇದರ ಡಿಸ್ಟ್ರಿಕ್ಟ್ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮವು ಮೇ 09ರಂದು ಬಿ ಸಿ ರೋಡಿನ ರೋಟರಿ ಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲೆ 3181ರ ಡಿಸ್ಟ್ರಿಕ್ಟ್ ಗವರ್ನರ್ ಮೇಜರ್ ಡೊನರ್ ಹೆಚ್ ಆರ್ ಕೇಶವ್ ಮಾತನಾಡಿ, ರೋಟರಿ ಕ್ಲಬ್ ಬಿಸಿ ರೋಡ್ ಸಿಟಿಯು ಕಳೆದ ಮೂರು ವರ್ಷಗಳಿಂದಲೂ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು ಈ ವರ್ಷದಲ್ಲಿ ಕೂಡ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದಿದೆ , ತಾಲೂಕಿನ 21 ಅಂಗನವಾಡಿ ಕೇಂದ್ರಗಳನ್ನು ಪುನಶ್ಚೇತನಗೊಳಿಸಲಾಗಿದೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನೇತ್ರ ಚಿಕಿತ್ಸ ಶಿಬಿರ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಟ್ರಾಫಿಕ್ ಅವರ್ನೆಸ್, ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮದ ಬಗ್ಗೆ, ಸಾರ್ವಜನಿಕರಿಗೆ ಉಪಯೋಗದ ಬಸ್ ತಂಗುದಾಣಗಳ ನಿರ್ಮಾಣ ಮುಂತಾದ ಹಲವು ಜನಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೋಟರಿ ಜಿಲ್ಲೆ 3181ರ ವಲಯ 4ರಲ್ಲಿ ಅತ್ಯುತ್ತಮ ಕ್ಲಬ್ ಆಗಿ ಮೂಡಿಬಂದಿದೆ ಎಂದು ಶ್ಲಾಘಿಸಿದರು,
ಸಹಾಯಕ ಗವರ್ನರ್ ಲಾರೆನ್ಸ್ ಗೊನ್ಸಲ್ವಿಸ್ ರೋಟರಿ ಸಿಟಿ ಕ್ಲಬ್ಬಿನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷರಾದ ರೋ ಗಣೇಶ್
ಶೆಟ್ಟಿ ಸ್ವಾಗತಿಸಿ, ಮಾನವ ಜನ್ಮವೆಂಬುದು ಶ್ರೇಷ್ಠ, ಹಸಿದವನಿಗೆ ಅನ್ನ ನೀಡುವುದು, ಜೀವನದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಕೂಡ ನಮ್ಮ ಕೈಲಾದ ಸಹಾಯ ಮಾಡಿದರೂ ಬದುಕು ಸಾರ್ಥಕವೆನಿಸುತ್ತದೆ ಎಂದು ನುಡಿದರು.
ಅತಿಥಿಗಳಾಗಿ ಕ್ಲಬ್ ಅಡ್ವೈಸರ್ ರೋ ಪದ್ಮನಾಭ ರೈ ಸ್ಥಾಪಕಾಧ್ಯಕ್ಷರಾದ ರೋ ಸತೀಶ್ ಕುಮಾರ್, ವಲಯ ಸೇನಾನಿ ರವೀಂದ್ರ ದರ್ಬೆ, ಮಧುಸೂದನ್, ಶೇಷಪ್ಪ ಮಾಸ್ಟರ್ ವೇದಿಕೆಯಲ್ಲಿದ್ದರು
ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಡಾ. ದುರ್ಗಾ ಪ್ರಸಾದ್, ಡಾ ಪುಷ್ಪಲತಾ, ಈಶ್ವರ್ ಮಲ್ಪೆ , ಜೋಸೆಫ್ ಕ್ರಾಸ್ತಾ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ದಿವ್ಯಶ್ರೀ ಎಂಬ ಯುವತಿಗೆ ಕಿಡ್ನಿ ಹಸ್ತಾಂತರಕ್ಕಾಗಿ ರೂ.1,60,000 ನೀಡಲಾಯಿತು, ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಯಿತು,
ಆನೆಟ್ ಅಶ್ನಿ ಕರ್ಕೇರ ಸ್ವಾಗತ ನೃತ್ಯ ಮೂಲಕ ಕಾರ್ಯಕ್ರಮ ಪ್ರಾರಂಭವಾಗಿ ರೋ ಪವಿತ್ರ ಮಯ್ಯ ಪ್ರಾರ್ಥನೆ ಹಾಡಿದರು, ರೋ ಪ್ರಥ್ವಿರಾಜ್ ಹಾಗೂ ಸುಪ್ರಿಯಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು.









