ಬಂಟ್ವಾಳ: ಬಂಟರ ಸಂಘದ 8 ನೇ ವಾರ್ಷಿಕೋತ್ಸವ. ಡಾ.ಎಂ.ಮೋಹನ ಆಳ್ವ, ಸುಶೀಲ ಜನಾರ್ದನ ಶೆಟ್ಟಿಗೆ ಸನ್ಮಾನ.

Coastal Bulletin
ಬಂಟ್ವಾಳ: ಬಂಟರ ಸಂಘದ 8 ನೇ ವಾರ್ಷಿಕೋತ್ಸವ. ಡಾ.ಎಂ.ಮೋಹನ ಆಳ್ವ, ಸುಶೀಲ ಜನಾರ್ದನ ಶೆಟ್ಟಿಗೆ ಸನ್ಮಾನ.

ಬಂಟ್ವಾಳ:ತುಳುನಾಡಿನ ಜನತೆ ಪ್ರತಿಷ್ಠೆ ಬದಿಗಿಟ್ಟು ಮನೆಯಲ್ಲಿ ತುಳುವಿನಲ್ಲೇ ಮಾತನಾಡಿದಾಗ ಮಕ್ಕಳಿಗೂ ತುಳುನಾಡಿನ ಸಂಸ್ಕೃತಿ ಮತ್ತು ವಿಶೇಷತೆ ಬಗ್ಗೆ ಅರಿವು ಮೂಡಿಸಲು ಸಾಧ್ಯವಿದೆ. ಸಮಾಜದಲ್ಲಿ ಕರ್ತವ್ಯ ನಿಷ್ಠೆಯಿಂದ ಮುಂದುವರಿದಾಗ ಪ್ರಶಸ್ತಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದರೆ ನಾವು ಎಂದಿಗೂ ಪ್ರಶಸ್ತಿ ಹಿಂದೆ ಹೋಗಬಾರದು ಎಂದು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿದರು. ಇಲ್ಲಿನ ತುಂಬೆ ವಳವೂರುಗುತ್ತು ಬಂಟರ ಭವನದಲ್ಲಿ ಬಂಟರ ಸಂಘದ ನೇತೃತ್ವದಲ್ಲಿ ಮಹಿಳಾ ವಿಭಾಗ, ಯುವ ವಿಭಾಗ, ವಲಯ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಭಾನುವಾರ ನಡೆದ 8ನೇ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಆರಂಭದಲ್ಲಿ ನಡೆದ 'ಬಂಟೆರೆ ಕಲಾ ಪಂಥ' ಸಾಂಸ್ಕೃತಿಕ ಸ್ಪರ್ಧೆಯನ್ನು ಮಂಗಳೂರು ಬಂಟರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ್ ಶೆಟ್ಟಿ ಉದ್ಘಾಟಿಸಿದರು. 

ವಿನೂತನ ಸನ್ಮಾನ:

ಇದೇ ವೇಳೆ ತುಳುನಾಡಿನ ಕೃಷಿ ಪರಂಪರೆಯಂತೆ ಅಕ್ಕಿ ಮುಡಿ ಸಹಿತ ಬಾಳೆಗೊನೆ, ಅಡಿಕೆ ಮತ್ತು ಸೀಯಾಳ ಗೊಂಚಲು ಬುಟ್ಟಿಯಲ್ಲಿ ಹೊತ್ತು ತಂದು ಚೆಂಡೆ, ಡೊಳ್ಳು, ಕೊಳಲು ವಾದನದಲ್ಲಿ ಮುಂಡಾಸುಧಾರಿಗಳು ತುಳು ಬಾವುಟ ಮತ್ತು ಬಣ್ಣದ ಕೊಡೆಯೊಂದಿಗೆ ಮೆರವಣಿಗೆಯಲ್ಲಿ ಬಂದು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮತ್ತು ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆ ಮುಖ್ಯಸ್ಥ ಕೆ.ಶಶಿಕಿರಣ್ ಶೆಟ್ಟಿ ಇವರ ಪರವಾಗಿ ತಾಯಿ ಸುಶೀಲ ಜನಾರ್ದನ ಶೆಟ್ಟಿ ಇವರನ್ನು ಬೆಳ್ಳಿ ಕಲಶ ನೀಡಿ ಸನ್ಮಾನಿಸಲಾಯಿತು. ಯುವ ಭಾಗವತ ಪಟ್ಲ ಸತೀಶ ಶೆಟ್ಟಿ ಭಾಗವತಿಕೆಯಲ್ಲಿ ಸನ್ಮಾನಿತರನ್ನು ಪರಿಚಯಿಸುತ್ತಿದ್ದಂತೆಯೇ ಯಕ್ಷಗಾನ ವೇಷಧಾರಿಗಳು ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. 

ಜಾಗತಿಕ ಬಂಟರ

ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಮಂಗ್ಲಿಮಾರ್ ಕ್ಷೇತ್ರದ ಧರ್ಮದರ್ಶಿ ಬಡಾಜೆಗುತ್ತು ರವಿಶಂಕರ ಶೆಟ್ಟಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾಧ್ಯಕ್ಷ ಸಿ.ಎ.ಶಾಂತಾರಾಮ ಶೆಟ್ಟಿ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ಕೋಶಾಧಿಕಾರಿ ಲೋಕೇಶ ಶೆಟ್ಟಿ ಕೆ., ಜೊತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ ಅರಳ, ಜೊತೆ ಕೊಸಾಧಿಕಾರಿ ಪ್ದರತಿಭಾ ಎ.ರೈ, ಮಹಿಳಾ ಘಟಕ ಅಧ್ಯಕ್ಷೆ ರಮಾ ಎಸ್.ಭಂಡಾರಿ, ಯುವ ವಿಭಾಗ ಅಧ್ಯಕ್ಷ ನಿಶಾನ್ ಆಳ್ವ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರಕಾಶ ಶೆಟ್ಟಿ ತುಂಬೆ, ವಿವಿಧ ವಲಯ ಅಧ್ಯಕ್ಷರು ಇದ್ದರು.

ಸಂಘದ ಉಪಾಧ್ಯಕ್ಷ ಡಾ.ಪ್ರಶಾಂತ್ ಮಾರ್ಲ ಸ್ವಾಗತಿಸಿ, ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ಪ್ರಾಸ್ತ್ತಾವಿಕ ಮಾತನಾಡಿದರು. ಚಂದ್ರಹಾಸ ರೈ ಬಾಲಾಜಿಬೈಲು ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ವಿಂಧ್ಯಾ ರೈ ಕಾರ್ಯಕ್ರಮ ನಿರೂಪಿಸಿದರು.

Leave a Comment