ಬಂಟ್ವಾಳ : ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇದರ ವರ್ಷಾವಧಿ ಉತ್ಸವವು ಜ.14 ರಿಂದ 18ರವರೆಗೆ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಬ್ರಹ್ಮಶ್ರೀ ಉಚ್ಚಿಲಾತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ವರ್ಷಾವಧಿ ಉತ್ಸವದ ಪೂರ್ವಭಾವಿಯಾಗಿ ಜ.12ರಂದು ಭಕ್ತಾದಿಗಳಿಂದ ಹಸಿರುವಾಣಿ ಹೊರೆಕಾಣಿಕೆಯನ್ನು ದೇವಸ್ಥಾನಕ್ಕೆ ಸಮರ್ಪಸಲಾಯಿತು.
ಜ.14ರಿಂದಜ.18ರ ವರೆಗೆ ಗಣಹೋಮ, ಕಲಾಶಾಭಿಷೇಕ, ಸಾಮೂಹಿಕ ಪ್ರಾರ್ಥನೆ, ಭಜನಾ ಸಂಕೀರ್ತನೆ ಸಹಿತ ನಿರಂತರ ವೈದಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಜ.18ರಂದು
ಬೆಳಿಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು,ಸಂಜೆ ಯಕ್ಷ ಮಿತ್ರರು ದೇವಂದಬೆಟ್ಟು ಹಾಗೂ ಹತ್ತು ಸಮಸ್ತರ ಸಹಕಾರದಲ್ಲಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














