ತುಂಬೆ :ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

Coastal Bulletin
ತುಂಬೆ :ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

ಬಂಟ್ವಾಳ :ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥರಾದ ವಿದ್ಯಾಕೆ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಧ್ಯಕ್ಷತೆ ವಹಿಸಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎನ್ನುವ ನೆಲೆಯಲ್ಲಿ ಮುಂದುವರಿಯುತ್ತಿರುವ ಇಂದಿನ ಈ ಯುಗದಲ್ಲಿ ಶಿಕ್ಷಣದ ಮಹತ್ವವನ್ನು ಅರಿತು ಮುನ್ನಡೆಯುವುದು ಅತ್ಯಗತ್ಯ. ಹಾಗಾಗಿ ಕಲಿಯುವ ವಯಸ್ಸಲ್ಲಿ ಯಾವುದೇ ಮಗುವನ್ನು ದುಡಿಮಿಗೆ ತಳ್ಳದೆ ಆ ಮಗುವಿಗೆ ಸರಿಯಾದ ಶಿಕ್ಷಣ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಂಗ್ಲ ಮಾಧ್ಯಮದ ಮುಖ್ಯಸ್ಥೆ ಮಲ್ಲಿಕಾ ಎಸ್. ಶೆಟ್ಟಿಯವರು ವಿದ್ಯೆ ಎನ್ನುವಂತದ್ದು ಅಮೃತವಿದ್ದಂತೆ ಆ ಅಮೃತ ಸಮಯದಲ್ಲಿ ಮಗುವನ್ನು ದುಡಿಮೆಗೆ ದೂಡುವುದರಲ್ಲಿ ಅರ್ಥವಿಲ್ಲ. ಶಿಕ್ಷಣ ಪ್ರತಿಯೊಬ್ಬ ಮಗುವಿನ ಆ ಜನ್ಮಸಿದ್ಧ ಹಕ್ಕು ಎಂದು ಹೇಳಿದರು. 

ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜಗದೀಶ್ ರೈ ಇವರು ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ಮಗುವಿನ ಹಕ್ಕು, ಅದನ್ನು

ಕಸಿದುಕೊಳ್ಳುವ ಹಾಗಿಲ್ಲ. ಹಾಲುಗೆನ್ನೆಯ ಮಕ್ಕಳನ್ನು ದುಡಿಸುವುದು ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಹೇಳಿದರು.

ಕನ್ನಡ ಶಿಕ್ಷಕ ರಮೇಶ್ ಬಾಲ ಕಾರ್ಮಿಕ ವಿರೋಧಿ ದಿನದ ಪ್ರಮಾಣ ವಚನವನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಜ್ಯೋತ್ಸ್ನಾ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶಿಕ್ಷಕಿ ಸೌಮ್ಯ ಸ್ವಾಗತಿಸಿ, ಶಿಕ್ಷಕ ರಮೇಶ್ ವಂದಿಸಿ, ವಿದ್ಯಾರ್ಥಿನಿ ಕುಮಾರಿ ಯಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Leave a Comment