ಬೆಂಜನಪದವು: ರಾಜ್ಯಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವ "ಆಕೃತಿ" 2024 ಸಂಪನ್ನ. ಸ್ಪರ್ಧಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದ ಕೆನರಾ ಕಾಲೇಜು ಮಂಗಳೂರು.

Coastal Bulletin
ಬೆಂಜನಪದವು: ರಾಜ್ಯಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವ "ಆಕೃತಿ" 2024 ಸಂಪನ್ನ. ಸ್ಪರ್ಧಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದ ಕೆನರಾ ಕಾಲೇಜು ಮಂಗಳೂರು.

ಬಂಟ್ವಾಳ :ತಾಲೂಕಿನ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 9ರಿಂದ 11ರ ಶನಿವಾರ ಮುಕ್ತಾಯಗೊಂಡ ಮೂರು ದಿನಗಳ ರಾಜ್ಯಮಟ್ಟದ ಅಂತರ್ ಕಾಲೇಜು ತಾಂತ್ರಿಕ ಸಾಂಸ್ಕೃತಿಕ ಉತ್ಸವ ಆಕೃತಿ 2024 ಯಶಸ್ವಿಯಾಗಿ ಸಂಪನ್ನಗೊಂಡಿತು.

ಸ್ಪರ್ಧಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಕೆನರಾ ಕಾಲೇಜು ಮಂಗಳೂರು ತಂಡ ಗೆದ್ದುಕೊಂಡಿದೆ. ನಿಟ್ಟೆ ಇಂಜಿನಿಯರಿಂಗ್ ಕಾಲೇಜು ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ಕಾಲೇಜು ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಎಮ್. ರಂಗನಾಥ ಭಟ್ ವಿಜೇತರಿಗೆ

ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಹೆಚ್.ಆರ್.ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಡಾ.ಪ್ರಿಯಾ ವಿ.ಫ್ರ್ಯಾಂಕ್ ,ಆಕೃತಿ ಮುಖ್ಯ ಸಮನ್ವಯಕಾರ ನವೀನ್.ಎ. ಕಲಾಲ್ , ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ವಿಜಯರಾಜ್ ಪೈ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment