ಬೆಂಗಳೂರು: ಅಡ್ಡಾದಿಡ್ಡಿ ಬಂದ ಕಾರು ಹರಿದು 5 ವರ್ಷದ ಬಾಲಕ ಸಾವು.

Coastal Bulletin
ಬೆಂಗಳೂರು: ಅಡ್ಡಾದಿಡ್ಡಿ ಬಂದ ಕಾರು ಹರಿದು 5 ವರ್ಷದ ಬಾಲಕ ಸಾವು.

ಬೆಂಗಳೂರು:ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಐದು ವರ್ಷದ ಬಾಲಕ ಬಲಿಯಾದ ಘಟನೆ ಜೀವನ್ ಭೀಮಾ ನಗರ ಸಂಚಾರ ಠಾಣಾ ವ್ಯಾಪ್ತಿಯ ಮುರುಗೇಶ್ ಪಾಳ್ಯದ ಕಾಳಪ್ಪ ಲೇಔಟ್​ನಲ್ಲಿ ಇಂದು ಬೆಳಗ್ಗೆ 10.30ಗೆ ನಡೆದಿದೆ. ಆರವ್ (5) ಮೃತ ಬಾಲಕ.

ಕಾರು ಚಾಲಕನ ಕುಟುಂಬ ಬಾಡಿಗೆ ಕಾರಲ್ಲಿ ರೆಸಿಡೆನ್ಶಿಯಲ್ ಏರಿಯಾದ ಬಳಿ ಬಂದಿತ್ತು. ಈ ವೇಳೆ ತಂದೆ ತನ್ನ ಮಗನಿಗೆ ಕಾರನ್ನು ನೋಡಿಕೊಳ್ಳುವಂತೆ ತಿಳಿಸಿದ್ದರು. ಆದರೆ ಯುವಕನು ಚಾಲಕನ ಸೀಟಲ್ಲಿ ಕುಳಿತು ಎಕ್ಸ್​ಲೆಟರ್​ ತುಳಿದಿದ್ದಾನೆ. ಇದರಿಂದ ನಿಯಂತ್ರಣ ಕಳೆದುಕೊಂಡು ಕಾರು​ ಮೊದಲು ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಬಳಿಕ ಮನೆ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ

ಕಾರು ಡಿಕ್ಕಿಯಾಗಿ ಆತನ ಮೇಲೆ ಹರಿದಿದೆ. ಪರಿಣಾಮ ಬಾಲಕ ಆರವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಹಾಗೂ ಇನ್ನೋರ್ವ ಬಾಲಕ ತೀವ್ರ ಗಾಯಗೊಂಡ ಬಗ್ಗೆ ವರದಿಯಾಗಿದೆ.ಘಟನಾ ಸ್ಥಳಕ್ಕೆ ಜೀವನ್ ಭೀಮಾ ನಗರ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಚಲಾಯಿಸಿದ್ದ ಬಾಲಕನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ‌ ಹಾಗೂ ಬಾಲಕ ಪೊಲೀಸ್ ಸಿಬ್ಬಂದಿಯ ಸಂಬಂಧಿ ಎಂದು ವರದಿಯಾಗಿದೆ.

Leave a Comment