ತುಂಬೆ : ಫೆ 15ರಂದು ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

Coastal Bulletin
ತುಂಬೆ : ಫೆ 15ರಂದು ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ :ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ,ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ), ತುಂಬೆ ಸರಕಾರಿ ಶಾಲಾಭಿವೃದ್ಧಿ ಸಮಿತಿ, ಆಶೀರ್ವಾದ ಸೇವಾ ಸಂಘ, ತುಂಬೆ ಭಾಗ್ಯೋದಯ ಮಿತ್ರ ಕಲಾವೃಂದ, ಯುವ ಶಕ್ತಿ, ಮಜಿ, ಶ್ರೀ ಪಿಲಿಚಂಡಿ ತಾಯೇಶ್ವರಿ ಸೇವಾ ಸಮಿತಿ, ತಂಜಕರಿಯ ತುಂಬೆ ಇವರ ಸಂಯುಕ್ತ ಆಶ್ರಯದಲ್ಲಿ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇದರ ಸಹಯೋಗದೊಂದಿಗೆ ತಜ್ಞ. ವೈದ್ಯರಿಂದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವು ಫೆ 15ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ ಗಂಟೆ 1.00ರ ತನಕ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ತುಂಬೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ

ಶಿಬಿರದ ವಿಶೇಷತೆಗಳು :

ಬಿ.ಪಿ., ಶುಗರ್, ಕಣ್ಣಿನ ಪರೀಕ್ಷೆ, ಇ.ಎನ್.ಟಿ., ಹೃದಯ ಸಂಬಂದಿ ಕಾಯಿಲೆ, ಸ್ತ್ರೀ ರೋಗ ತಪಾಸಣೆ

* ಶಿಬಿರದಲ್ಲಿ ಸಂಪೂರ್ಣ ಕಣ್ಣಿನ ತಪಾಸಣೆ ನಡೆಸಲಾಗುವುದು.

* ಸ್ತ್ರೀರೋಗ ವಿಭಾಗದ ನುರಿತ ತಜ್ಞರಿಂದ ತಪಾಸಣೆ ಮಾಡಲಾಗುವುದು.

* ವೈದ್ಯರ ಸಲಹೆಯೊಂದಿಗೆ ಇ.ಸಿ.ಜಿ. ಮಾಡಲಾಗುವುದು.

* ಕೀಲು ನೋವು ವಿಭಾಗದ ನುರಿತ ತಜ್ಞ

ವೈದ್ಯರಿಂದ ತಪಾಸಣೆ.

* ಕಿವಿ, ಮೂಗು, ಗಂಟಲು ಪರೀಕ್ಷೆ (ಇ.ಎನ್.ಟಿ.)

* ನುರಿತ ತಜ್ಞ ವೈದ್ಯರಿಂದ ಸಮಾಲೋಚನೆ ಲಭ್ಯವಿದೆ.

ರಕ್ತದಾನ ಮಾಡುವುದರಿಂದ ಆಗುವ

ಪ್ರಯೋಜನಗಳು :

ಹೃದಯ ಸಂಬಂದಿ ಕಾಯಿಲೆಯ ಅಪಾಯ ಕಡಿಮೆ

ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ.

ಅತೀ ಮುಖ್ಯವಾಗಿ ಮೂರು ಜೀವಗಳನ್ನು ಉಳಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ :

9740537752 / 7411593927

7338172557

Leave a Comment