ತುಂಬೆ: ಗ್ರಾ ಪಂ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

Coastal Bulletin
ತುಂಬೆ: ಗ್ರಾ ಪಂ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಆವರಣದಲ್ಲಿ 2024-25ನೇ ಹಾಗೂ 2025-26ನೇ ಸಾಲಿನ ಸ್ವಂತ ನಿಧಿ ಹಾಗೂ 15ನೇ ಹಣಕಾಸು ಅನುದಾನದಲ್ಲಿ ತಡೆಗೋಡೆ ರಚನೆ, ವಾಹನ ನಿಲುಗಡೆ ಶೆಡ್, ಇಂಟರ್ ಲಾಕ್ ಕಾಮಗಾರಿಗಳ ಉದ್ಘಾಟನಯನ್ನು ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನೆರವೇರಿಸಿದರು.

ಈ ಸಂದರ್ಭದಲ್ಲಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಕೇಶವ, ಉಪಾಧ್ಯಕ್ಷ ಗಣೇಶ್ ಸಾಲ್ಯಾನ್ ತುಂಬೆ ನಿಕಟ ಪೂರ್ವ ಅಧ್ಯಕ್ಷ ಪ್ರವೀಣ್ ಬಿ ತುಂಬೆ, ಗ್ರಾ ಪಂ ಸದಸ್ಯರಾದ ಹೇಮಾಲತ, ಅರುಣ್ ಕುಮಾರ್, ಕಿಶೋರ್, ಮಹಮ್ಮದ್ ಝಹೂರ್, ಅಬ್ದುಲ್ ಅಝೀಜ್, ಇಬ್ರಾಹಿಂ, ಶಶಿಕಲಾ, ಮುನೀರಾ, ಅತಿಕ ಬಾನು, ಜಯಂತಿ ಶ್ರೀಧರ, ಜಯಂತಿ ನಾಗೇಶ್, ಮಾಜಿ ಸದಸ್ಯರಾದ ಮೋನಪ್ಪ ಮಜಿ, ಚಂದ್ರಹಾಸ ಕಡೆಗೋಳಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶಿವುಲಾಲ್ ಚವ್ಹಾಣ್,ಪ್ರಮುಖರಾದ ಸದಾಶಿವ ಡಿ ತುಂಬೆ, ಜಗದೀಶ್ ಗಟ್ಟಿ, ಆನಂದ ಸುವರ್ಣ , ದೇವದಾಸ್ ಪರ್ಲಕ್ಕೆ,

ಗುತ್ತಿಗೆದಾರರಾದ ಪ್ರಶಾಂತ್ ಕೊಟ್ಟಾರಿ, ಪಂಪು ಚಾಲಕರಾದ ಉಮರ್, ಶ್ರೀಧರ್, ಗೋಪಾಲ, ಮನೋಹರ ಕೊಟ್ಟಾರಿ, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ತುಂಬೆ , ತುಂಬೆ ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ, ಗ್ರಾಮ ಪಂಚಾಯತ್ನ ಗ್ರಾಮ ಆಡಳಿತಾಧಿಕಾರಿ ಪ್ರಶಾಂತ್, ಗ್ರಾಮ ಸಹಾಯಕರು ಪುರುಷೋತ್ತಮ ಅಂಚೆ ಇಲಾಖಾ ಸಿಬ್ಬಂದಿಗಳಾದ ರೇಖಾ, ಹರೀಶ್, ಶಿವಪ್ರಸಾದ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ತುಂಬೆ ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ, ಸ್ವಾಗತಿಸಿ ವಂದಿಸಿದರು.

Leave a Comment