ಬಂಟ್ವಾಳ: ಬಂಟ್ವಾಳ ಪುರಸಭೆ ಬಿ.ಸಿ.ರೋಡ್ ಪ್ಲೈಓವರ್ ಸುಂದರೀಕರಣ ಕಾಮಗಾರಿ ನಡೆಯುತ್ತಿದ್ದು, ಮೇಲ್ ಸೇತುವೆ ಅಡಿಯಲ್ಲಿ ಪಿಲ್ಲರ್‌ಗಳ ಗೋಡೆಗಳಲ್ಲಿ ಯಾವುದೇ ತರಹದ ಬಿತ್ತಿ ಪತ್ರ, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದನ್ನು ತಕ್ಷಣದಿಂದ ನಿಷೇಧಿಸಿ ಎಚ್ಚರಿಕೆ ನೀಡಲಾಗಿದೆ.
ಪ್ರಕಟಣೆ ಉಲ್ಲಂಘಿಸಿ ಭಿತ್ತಿ ಪತ್ರ ಬ್ಯಾನರ್ ಇತ್ಯಾದಿ ಅಳವಡಿಸಿದಲ್ಲಿ ಅಂತಹ ವ್ಯಕ್ತಿಗಳ, ಸಂಘ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ದಾಖಲು ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಈ ಮೂಲಕ ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.















