Coastal Bulletin

ಬಂಟ್ವಾಳ: ಜೀವನದಲ್ಲಿ ಎದುರಾಗುವ ಪರೀಕ್ಷೆಗಳಿಗೂ ಉತ್ತರ ಸಿಗುವಂತಹಾ ಸಂಸ್ಕಾರ ಭರಿತ ಶಿಕ್ಷಣ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಿಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಶನಿವಾರ ಸಂಜೆ ಕಲ್ಲಡ್ಕ ಹನುಮಾನ್ ನಗರದ ಮೈದಾನದಲ್ಲಿ  ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಕ್ರೀಡೋತ್ಸವಕ್ಕೆ ಬೆಲೂನ್ ಆಕಾಶಕ್ಕೆ ಹಾರಿಸುವ ಮೂಲಕ ಚಾಲನೆ ನೀಡಿ ಭಾಗವಹಿಸಿ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ, ಕಾಲೇಜು ಮುಗಿದಾಕ್ಷಣ  ವಿದ್ಯಾರ್ಥಿ ಜೀವನ ಮುಗಿಯಿತು ಎಂದುಕೊಳ್ಳಬೇಡಿ, ಬದುಕಿನುದ್ದಕ್ಕೂ ಅನೇಕ ಪರೀಕ್ಷೆಗಳಿರುತ್ತದೆ, ಅವುಗಳಿಗೆ ಅಗತ್ಯವಿರುವ ಜೀವನ ಮೌಲ್ಯಗಳನ್ನು ಪ್ರಭಾಕರ ಭಟ್ ನೇತೃತ್ವದ ಈ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಿಗುತ್ತಿದೆ, ಇಂತಹಾ  ಶಿಕ್ಷಣ ಸಂಸ್ಥೆ ಭಾರತದಲ್ಲಿ ಎಲ್ಲಿಯೂ ಇಲ್ಲ ಎಂದರು.

ಯಾರು, ಏನು, ಎಲ್ಲಿ ,ಹೇಗೆ ಯಾವಾಗ ಈ ಐದು ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ನಮ್ಮ‌ ಜೀವನ ಯಶಸ್ಸಾಗಲು ಸಾಧ್ಯ ಎಂದ  ಮುಖ್ಯಮಂತ್ರಿಯವರು ಪ್ರಭಾಕರ ಭಟ್ ಈ ಕಾರ್ಯಕ್ರಮಕ್ಕೆ ಬರಲು ಹೇಳಿದ್ದರು, ಕಾರ್ಯದೊತ್ತಡದಿಂದ ಅಸಾಧ್ಯ ಎಂದು ಹೇಳಿದ್ದೆ, ಆದರೆ ಬಿಡುವು ಮಾಡಿಕೊಂಡು‌ ಬಂದೆ. ವಿದ್ಯಾರ್ಥಿಗಳ ಪ್ರದರ್ಶನ ನೋಡಿದಾಗ ಬೆರಗಾಯಿತು, ನಾನು ಬರದೇ ಇದ್ರೆ ನನಗೇ ನಿರಾಸೆಯಾಗುತ್ತಿತ್ತು ಎಂದರು.

ಗೃಹಸಚಿವ ಅರಗ ಜ್ಞಾನೇಂದ್ರ,ಕಂದಾಯ ಸಚಿವರುಗಳಾದ ಆರ್.ಆಶೋಕ್,ಸೋಮಶೇಖರ್ , ಎನ್.ಮುನಿರತ್ನ,ಶಂಕರ ಪಾಟೀಲ್ ಮುನೇನಕೊಪ್ಪ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್,ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಮತ್ತು ಬಂದರು ಸಚಿವಎಸ್. ಅಂಗಾರ,ಸಂಸದ  ಎಸ್ ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ನವ ಮಂಗಳೂರು ಬಂದರು ಟ್ರಸ್ಟ್ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ದುಬೈ, ಮುಂಬೈಯ ಉದ್ಯಮಿ ಪ್ರಸಾದ್ ಶೆಟ್ಟಿ, ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ನಾಗರಾಜ ಶೆಟ್ಟಿ, ಪ್ರಮೋದ್‌ ಮಧ್ವರಾಜ್ ಉಡುಪಿ, ಶಾಸಕರುಗಳಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಕುಮಾರ ಬಂಗಾರಪ್ಪ,

ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಸುಕುಮಾರ್ ಶೆಟ್ಟಿ, ಲಾಲಜಿ ಮೆಂಡನ್, ಪ್ರತಾಪ್ ಸಿಂಹ ನಾಯಕ್ ಬೆಳ್ತಂಗಡಿ,ಉಮಾನಾಥ ಕೋಟ್ಯಾನ್, ರವಿಕುಮಾರ್ ,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮುದ್ದೇನಹಳ್ಳಿ

ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಮ್ ನ ಅಧ್ಯಕ್ಷ ಬಿ. ಎನ್. ನರಸಿಂಹಮೂರ್ತಿ, ಗುಲ್ಬರ್ಗಕ್ಯಾಂಪಸ್    ಶ್ರೀ ಸತ್ಯಸಾಯಿ ವಿದ್ಯಾನಿಕೇತನದ ಅಧ್ಯಕ್ಷರಾದ ಗೋವಿಂದ ರೆಡ್ಡಿ,ಮುಂಬೈ ಬ್ಲಿಸ್ ಜಿ.ವಿ.ಎಸ್, ಫಾರ್ಮ್ ನ ಆಡಳಿತ ನಿರ್ದೇಶಕ ಎಸ್. ಎನ್. ಕಾಮತ್,ಮುಂಬೈ ಟೆಲಿ ಮಾಕ್೯ ನ ಸಿಇಒ  ಪ್ರವೀಣ್ ಶೆಟ್ಟಿ, ಮುಂಬೈ ಭಂಡಾರಿ ಸೇವಾ ಸಮಿತಿ ಅಧ್ಯಕ್ಷ

ಸದಾಶಿವ ಭಂಡಾರಿ, ಮುಂಬೈ ಉದ್ಯಮಿಗಳಾದ ಅಶೋಕ್ ಭಂಡಾರಿ,  ಹಿರೇನ್ ಬ್ಯಾ .ಕೆ,ಕರುಣಾಕರ ಶೆಟ್ಟಿ,ಉದ್ಯಮಿ ಲಕ್ಷ್ಮೀ ಮೋಹನ್ ಉಜಿರೆ, ಉದ್ಯಮಿಗಳಾದ ಜಿ., ರಾಮೇಶ್ವರ ರಾವ್,  ಆರ್.ಎಲ್, ರಮೇಶ್, ಬಾಬು, ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ,ಎಂ.ಎಸ್, ಚಂದ್ರಶೇಖರ,ಅಶೋಕ್ ಕುಮಾರ್ ಶೆಟ್ಟಿ,ಡಾ.ಸುರೇಶ್ಎಸ್.ಎಮ್.ಬೆಂಗಳೂರು,ಡಾ.ಜೆ.ಪಿ.ಪ್ರಕಾಶ್ ಬೆಂಗಳೂರು,ಲೋಕೇಶ್ ರಾಜ್ ಬೆಂಗಳೂರು,ಉದಯಕೋಟ್ಯಾನ್,ಉದಯಕುಮಾರ್ ಶೆಟ್ಟಿ ಮುನಿಯಾಲು,ಯದು ನಾರಾಯಣ ಶೆಟ್ಟಿ ಮುಂಬೈ, ವಕೀಲರುಗಳಾದ ಶಾಂತಾರಾಮ ಶೆಟ್ಟಿ ಉಡುಪಿ,ಉಮೇಶ್ ಶೆಟ್ಟಿ,ಸಹಾಯಕ ಕಮಿಷನರ್ ಮದನ್ ಮೋಹನ್,  ಜಿಪಂಸಿಇಒ ಡಾ.ಕುಮಾರ್,ರಶ್ಮೀ ಎಸ್.ಆರ್. ಹಿಂದುಳಿದ ವರ್ಗದ ಇಲಾಖಾಧಿಕಾರಿ,ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾ ರಾಮು ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಶಾಲಾ ಅಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ,ಸಂಚಾಲಕ ವಸಂತಮಾಧವ, ಕಮಲಾ ಪ್ರಭಾಕರ ಭಟ್  ಮೊದಲಾದವರಿದ್ದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕ ಜಿನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯಮಂತ್ರಿಯವರು ಸಹಿತ ಸಚಿವರು,ಶಾಸಕರು,ಗಣ್ಯರು ಮಳೆಯನ್ನು ಲೆಕ್ಕಿಸದೆ ಮಕ್ಕಳ ಪ್ರದರ್ಶನವನ್ನು ವೀಕ್ಷಿಸಿದರು. ವಿದ್ಯಾರ್ಥಿಗಳು ಕೂಡ ಹನಿಹನಿ ಮಳೆಗೆ ಖುಷಿಯಿಂದಲೇ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ‌ ನೆರೆದ ಜನಸ್ತೋಮದ ಮನಗೆದ್ದರು.

Leave a Comment