ಬಂಟ್ವಾಳ :ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಬಡಗಬೆಳ್ಳೂರು ಇದರ ಜೀರ್ಣೋದ್ಧಾರ ಸಮಿತಿಯ ಮತ್ತು ಭಕ್ತಾಭಿಮಾನಿಗಳ ಸಭೆಯು ಜೂ 9ರಂದು ಆದಿತ್ಯವಾರ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರದ ಸಲುವಾಗಿ ನೂತನ ಸಮಿತಿ ಯನ್ನು ರಚಿಸಲಾಯಿತು.ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಭುವನೇಶ್ ಪಚ್ಚಿನಡ್ಕ ಸರ್ವನುಮತದಿಂದ ಆಯ್ಕೆಯಾದರು.
ಇತರ ಪದಾಧಿಕಾರಿಗಳ ವಿವರ :
ಗೌರವಾಧ್ಯಕ್ಷರು ರಾಜೇಶ್ ನಾಯಕ್ ಉಳಿಪಾಡಿಗುತ್ತು,ರಮಾನಾಥ ರೈ ಬೆಳ್ಳಿಪಾಡಿ ಕಾರ್ಯಾಧ್ಯಕ್ಷರುಗಳು ಉಮೇಶ್ ಸಾಲಿಯಾನ್ ಬೆಂಜನಪದವು, ರಘು ಎಲ್. ಶೆಟ್ಟಿ, ಗಂಗಾಧರ ಕೊಪ್ಪಲ,ದೇವಪ್ಪ ಪೂಜಾರಿ ಬಾಳಿಕೆ, ಸಂದೀಪ್ ಸದಾಶಿವ ಬೊಳ್ಳೂರು, ಪ್ರಧಾನ ಕಾರ್ಯದರ್ಶಿ
ಚಂದ್ರಹಾಸ ಪಲ್ಲಿಪಾಡಿ, ಕಾರ್ಯದರ್ಶಿ ರೋಶನ್ ಪುಂಚಮೆ, ಯತೀಶ್ ಸಾಣೂರು, ಕೋಶಾಧಿಕಾರಿ ಸಂಕೇತ್ ಈಶನಗರ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕಮ್ಮಾಜೆ, ಪ್ರಸನ್ನ ಕುಮಾರ್,ಮಾಧವ ಡಿ. ಬಂಗೇರ,
ಗೌರವ ಸಲಹೆಗಾರರು. ಉಪಾಧ್ಯಕ್ಷರುಗಳು, ಜೊತೆಕಾರ್ಯದರ್ಶಿಗಳು ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಇದರ ಟ್ರಸ್ಟಿಗಳು ಜೀರ್ಣೋದ್ಧಾರ ಸಮಿತಿಯೊಂದಿಗೆ ಸೇರಿ ದೇವಸ್ಥಾನದ ಕೆಲಸಗಳನ್ನು ಆದಷ್ಟು ಶೀಘ್ರದಲ್ಲಿ ಮಾಡುವುದೆಂದು ನಿರ್ಧರಿಸಲಾಯಿತು.









