ಬಂಟ್ವಾಳ :ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಆಶ್ರಯದಲ್ಲಿ ಆಟಿ ತಿಂಗಳ ವಿಶೇಷತೆ ಹಾಗೂ ತುಳು ಸಂಸ್ಕೃತಿಗಳನ್ನು ನೆನಪಿಸುವ ನಿಟ್ಟಿನಲ್ಲಿ "ಆಟಿಡೊಂಜಿ ಗಮ್ಮತ್" ಎಂಬ ಕಾರ್ಯಕ್ರಮ ಅ 13ರಂದು ಭಾನುವಾರ ನೆತ್ತರಕೆರೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಂಡು ನಂತರ ವಿವಿಧ ಕ್ರೀಡಾ ಹಾಗೂ ಮನೋರಂಜನ ಕಾರ್ಯಕ್ರವಿದ್ದು,
ಮಧ್ಯಾಹ್ನ ಆಟಿ ತಿಂಗಳ ವಿಶೇಷ ಸವಿಯ ಸಹಭೋಜನ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.















