ಬಿ ಸಿ ರೋಡ್: "ರಾವ್ ಆ್ಯಂಡ್ ಶೆಟ್ಟಿ" ನೂತನ ಅಡ್ವೋಕೇಟ್ ಕಚೇರಿಯ ಶುಭಾರಂಭ.

Coastal Bulletin
ಬಿ ಸಿ ರೋಡ್: "ರಾವ್ ಆ್ಯಂಡ್ ಶೆಟ್ಟಿ" ನೂತನ ಅಡ್ವೋಕೇಟ್ ಕಚೇರಿಯ ಶುಭಾರಂಭ.

ಬಂಟ್ವಾಳ: ತಾಲೂಕಿನ ಬಿ ಸಿ ರೋಡ್ ರಕ್ತೇಶ್ವರಿ ದೇವಸ್ಥಾನದ ಬಳಿ ಇರುವ ಪಾರ್ಕ್ಸ್ ಸ್ಕ್ವೇರ್ ಕಟ್ಟಡದ ಎರಡನೇ ಮಹಡಿಯಲ್ಲಿ ಯುವ ವಕೀಲರಾದ ಪ್ರಥ್ವಿಶ್ ರಾವ್ ಹಾಗೂ ಸಂದೀಪ್ ಶೆಟ್ಟಿ ಇವರ "ರಾವ್ ಆ್ಯಂಡ್ ಶೆಟ್ಟಿ" ನೂತನ ಅಡ್ವೋಕೇಟ್ ಕಚೇರಿಯು ಜು.10ರಂದು ಗುರುವಾರ ಶುಭಾರಂಭಗೊಂಡಿತು.

ಕಚೇರಿಯನ್ನು ಹಿರಿಯ ವಕೀಲರಾದ ಎಂ. ವಿ ಶಂಕರ್ ಭಟ್,ಮಂಗಳೂರು ಇವರು ಕಚೇರಿಯನ್ನು ಉದ್ಘಾಟಿಸಿ ದೀಪ ಬೆಳಗಿಸಿ ಶುಭ ಹಾರೈಸಿದರು. ಎಮ್.ಎಸ್ ಕೃಷ್ಣ ಪ್ರಸಾದ್ ಸೀನಿಯರ್ ಅಡ್ವೋಕೇಟ್ ಮಂಗಳೂರು, ಕೆ. ಗಣೇಶ್ ಶೆಣೈ

ಸೀನಿಯರ್ ಅಡ್ವೋಕೇಟ್ ಮಂಗಳೂರು ಇವರು ಉಪಸ್ಥಿತರಿದ್ದರು,

ಹಿರಿಯ ವಕೀಲರಾದ ಗಣೇಶಾನಂದ ಸೋಮಯಾಜಿ, ರಮೇಶ್ ಉಪಾಧ್ಯಯ, ರಮೇಶ್ ಸೋಮಾಯಾಜಿ ಸಹಿತ ಅನೇಕ ಹಿತೈಷಿಗಳು ಕಚೇರಿಗೆ ಬಂದು ಶುಭ ಹಾರೈಸಿದರು.


Leave a Comment