ಬಂಟ್ವಾಳ :ವಿಶ್ವ ಗಾಣಿಗರ ಚಾವಡಿ (ರಿ.) ಮಂಗಳೂರು,ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಕಂಕನಾಡಿ ಮಂಗಳೂರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ದ.ಕ. ಸಂಯುಕ್ತಾಶ್ರಯದಲ್ಲಿ ಆಗಸ್ಟ್ 17, ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1ರ ವರೆಗೆ ಸಾರ್ವಜನಿಕ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರವು ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಚಿರಾವಿ ಆಪ್ಟಿಕಲ್ಸ್ ಪಾಣೆಮಂಗಳೂರು ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಬೆಳಿಗ್ಗೆ 8.30ರಿಂದ ಸಂಜೆವರೆಗೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು,ಇದರ ಸಹಕಾರದೊಂದಿಗೆ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಚಿಕಿತ್ಸೆಗಳ ವಿವರ
1. GENERAL MEDICINE(ಹೃದ್ರೋಗ ಇಸಿಜಿ, ಶೀತ, ಜ್ವರ ಇನ್ನಿತರ)
2. GENERAL SURGERY(ಅಪಘಾತ ಚಿಕಿತ್ಸೆ)
3. OBG ಪ್ರಸವ ಪೂರ್ವ ಪರೀಕ್ಷೆ
4. ENT (ಥೈರಾಯ್ಡ್, ಅಲ್ಸರ್) ಕಣ್ಣು, ಮೂಗು, ಗಂಟಲಿನ ಚಿಕಿತ್ಸೆ
5. ORTHO(ಮೂಳೆ ಶಸ್ತ್ರಚಿಕಿತ್ಸೆ)
6. PEDIATRIC ಮಕ್ಕಳ ತಜ್ಞರು
7. DERMATOLOGIST ಚರ್ಮ
ರೋಗ ತಜ್ಞರು
8. PSYCHIATRIST ಮಾನಸಿಕ ಚಿಕಿತ್ಸೆ (ಮದ್ಯ ವರ್ಜನ, ವ್ಯಸನ ಮುಕ್ತ ಚಿಕಿತ್ಸೆ)
9. SURGICAL ONCOLOGY ಕ್ಯಾನ್ಸರ್ ಸ್ಕ್ರೀನಿಂಗ್
ಸಾರ್ವಜನಿಕರಿಗೆ ಮುಕ್ತ ಅವಕಾಶ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಈ ಎಲ್ಲಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.
ಮಧ್ಯಾಹ್ನ ನಂತರ ವಾರ್ಷಿಕ ಮಹಾಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.
ಸಹಕರಿಸುವ ಸಂಘಸಂಸ್ಥೆಗಳು
ಸಾಫಲ್ಯ ಸೇವಾ ಸಂಘ(ರಿ.) ಮುಂಬೈ. ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘ, ಪಾಣೆಮಂಗಳೂರು. ವೀರಮಾರುತಿ ಭಜನಾ ಮಂದಿರ ಮತ್ತು ವ್ಯಾಯಾಮ ಶಾಲೆ ಮೊಗರ್ನಾಡು, ಆಶಾ ಕಾರ್ಯಕರ್ತೆಯರು, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ, ಪಾಣೆಮಂಗಳೂರು.













