ಮಂಗಳೂರು :ಜಿಲ್ಲಾ ಕುಲಾಲರ ಮಾತೃ ಸಂಘದ ಕನಸಿನ ಯೋಜನೆಯಲ್ಲೊಂದಾದ ಕುಲಾಲ ಸಮುದಾಯದ ವಿದ್ಯಾರ್ಥಿನಿಯಾರಿಗೆ ನಗರ ಪ್ರದೇಶದಲ್ಲಿ ಉಚಿತ ವಸತಿ ನಿಲಯ ನಿರ್ಮಾಣದ ಕನಸಿಗೆ ಮತ್ತಷ್ಟು ಬಲ ಬಂದಿದ್ದು, ಕುಲಶೇಖರ ಪದವು ಗ್ರಾಮದ ಸ ನಂ 171/2ಎ ರಲ್ಲಿನ 7.90ಸೆಂಟ್ಸ್ ವಿಸ್ತೀರ್ಣದ ನಿವೇಶನವನ್ನು ಕುಲಾಲ ಸಮುದಾಯದ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿದ್ದು ಜಿಲ್ಲಾ ಮಾತೃ ಸಂಘದ ಅಹರ್ನಿಸಿ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ತಿಳಿಸಿದ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಮುಂದಿನ ವರ್ಷ ಜಿಲ್ಲಾ ಮಾತೃ ಸಂಘದ ಶಮಾನೋತ್ಸವ ಸಂಭ್ರಮದ ಸಮಯದಲ್ಲಿ ಲೋಕಾರ್ಪಣೆ ಮಾಡಲು ಶಕ್ತಿಮೀರಿ ಗರಿಷ್ಠ ಪ್ರಯತ್ನ ಮಾಡಲಾಗುವುದು ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ರೂ 2ಕೋಟಿ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಾತೃ ಸಂಘವು ಸಮಸ್ತ ಕುಲಾಲ ಸಮುದಾಯದ ಶ್ರೇಯೋಭಿವೃದ್ಧಿಗೆ ನಿರಂತರ ಅವಿರತವಾಗಿ ಶ್ರಮಿಸುತಿದ್ದು ಈ ಯೋಜನೆಯಿಂದ ಮಡಿಕೇರಿ, ಸುಳ್ಯ, ಪುತ್ತೂರು, ಕಾಸರಗೋಡು, ಮುಂತಾದ ದೂರ ಪ್ರದೇಶದ ಗ್ರಾಮೀಣ ಭಾಗದಿಂದ ಶೈಕ್ಷಣಿಕ ಉದ್ದೇಶದಿಂದ ಬರುವ ವಿದ್ಯಾರ್ಥಿನಿಯರಿಗೆ ಬಹಳಷ್ಟು ಪ್ರಯೋಜನವಗಲಿದೆ ಹಾಗೂ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಎಷ್ಟು ಕಠಿಣ ಜವಾಬ್ದಾರಿಯನ್ನು ಕೂಡ ಎಲ್ಲರ ಸಹಕಾರದಿಂದ ನಿಷ್ಠೆಯಿಂದ ನಿಭಾಯಿಸಲಾಗುವುದು ಎಂದರು ಹೇಳಿದರು.
ಕುಲಾಲ ಸಮುದಾಯವು ಸಾಮಾಜಿಕ,ಶೈಕ್ಷಣಿಕ, ರಾಜಕೀಯವಾಗಿ ಮುಂದೆ ಬರಬೇಕೆಂಬ ಸ್ಪಷ್ಟ ಉದ್ದೇಶದಿಂದ ಕಳೆದ ಕೆಲವು ವರುಷಗಳಿಂದ ಜಿಲ್ಲಾ ಮಾತೃ ಸಂಘವು ನಿರಂತರವಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದು ಸಮುದಾಯದ ಏಳಿಗೆಯ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದ್ದು ಈಗಾಗಲೇ ಕುಲಾಲರ ಕುಲ ದೇವರಾದ ಕುಲಶೇಖರ ಶ್ರೀ ವೀರ ನಾರಾಯಣ ದೇವಸ್ಥಾದ ಪುನರ್ ನಿರ್ಮಾಣ ಬ್ರಹ್ಮಕಲಶೋತ್ಸವ ವು ಸಮಸ್ತ ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ನಡೆದಿದೆ ಎಂದರು.
ಇತ್ತೀಚಿಗೆ ಮಾತೃ ಸಂಘದ ಮನವಿಯ ಮೇರೆಗೆ ಕುಲಾಲ ಸಮಾಜದ
ನೇತಾರ ಡಾ ಬಾಳಪ್ಪರ ಹೆಸರನ್ನು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ರಸ್ತಗೆ ನೀಡಲು ಸರಕಾರದಿಂದ ಒಪ್ಪಿಗೆ ಸಿಕ್ಕಿದ್ದು ಮುಂದಿನ ಆಗಸ್ಟ್ 10ರಂದು ನಾಮಫಲಕ ಅನಾವರಣ ಕಾರ್ಯಕ್ರಮವು ನಡೆಯಲಿದೆ ಎಂದು ಹೇಳಿದರು.
ವಿದ್ಯಾರ್ಥಿನಿ ನಿಲಯದ ನಿವೇಶನ ಮಂಜೂರಾತಿಗೆ ಮಾತೃ ಸಂಘದೊಟ್ಟಿಗೆ ನಿಕಟ ಸಂಪರ್ಕವಿಟ್ಟು ಶ್ರಮಿಸಿದ ಮುಡಿಪು ಕುಲಾಲ ಸಂಘದ ಅಧ್ಯಕ್ಷರಾದ ಯು ಪುಂಡರಿಕಾಕ್ಷ, ಹಾಗೂ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್, ಬಂಟ್ವಾಳ ಸಮಾಜ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್, ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ದ ಅಧ್ಯಕ್ಷರಾದ ಭಾಸ್ಕರ್ ಎಂ ಪೆರುವಾಯಿ ಹಾಗೂ ಜಿಲ್ಲಾ ಮಾತೃಸಂಘದ ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಕುಲಾಲ್ ಮತ್ತು ಮಹಿಳಾ ವಿಭಾಗದ ಮಾಜಿ ಅಧ್ಯಕ್ಷ ಜಲಜಾಕ್ಷಿ ಪಿ .ಕುಲಾಲ್ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.













