ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆಯಿಂದ ಮಾರ್ಚ್/ಏಪ್ರಿಲ್ 2024 ಎಸ್.ಎಸ್.ಎಲ್.ಸಿ. ಪರೀಕ್ಷೆಗೆ 36 ವಿದ್ಯಾರ್ಥಿಗಳು ಹಾಜರಾಗಿದ್ದು, 36 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 100% ಫಲಿತಾಂಶ ಬಂದಿರುತ್ತದೆ.
ಉತ್ತೀರ್ಣರಾದವರಲ್ಲಿ 05 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 06 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. 581 ಅಂಕ ಗಳಿಸಿ ಕಾವ್ಯಶ್ರೀ ಪ್ರಥಮ ಸ್ಥಾನ, 558 ಅಂಕ ಗಳಿಸಿ ಆಯಿಷತುಲ್ ಮುಬಶಿರ ಹಾಗೂ ಯಶಿಕಾ ದ್ವಿತೀಯ ಸ್ಥಾನ ಹಾಗೂ 543 ಅಂಕ ಗಳಿಸಿ ದೀಪ್ತಿ ಹಾಗೂ ಖತೀಜ ಹಯ ತೃತೀಯ ಸ್ಥಾನ ಪಡೆದಿರುತ್ತಾರೆ.
ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯಿಂದ ಮಾರ್ಚ್/ಏಪ್ರಿಲ್ 2024 ಎಸ್.ಎಸ್.ಎಲ್.ಸಿ. ಪರೀಕ್ಷೆಗೆ 81 ವಿದ್ಯಾರ್ಥಿಗಳು ಹಾಜರಾಗಿದ್ದು, 81 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 100% ಫಲಿತಾಂಶ ಬಂದಿರುತ್ತದೆ.
ಉತ್ತೀರ್ಣರಾದವರಲ್ಲಿ 18
ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 61 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 02 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. 607 ಅಂಕ ಗಳಿಸಿ ಆಮಿನ ಸಹ್ಬ ಪ್ರಥಮ ಸ್ಥಾನ, 603 ಅಂಕ ಗಳಿಸಿ ತೋಮ್ಸನ್ ರೆಕ್ಸ್ ಫೆರ್ನಾಂಡಿಸ್ ದ್ವಿತೀಯ ಸ್ಥಾನ ಹಾಗೂ 599 ಅಂಕ ಗಳಿಸಿ ಫಾತಿಮತ್ ಲಿಯಾ ತೃತೀಯ ಸ್ಥಾನ ಪಡೆದಿರುತ್ತಾರೆ.
ಗ್ರಾಮೀಣ ಪ್ರದೇಶದಲ್ಲಿರುವ ಈ ಶಿಕ್ಷಣ ಸಂಸ್ಥೆಯು ಕಳೆದ 34 ವರ್ಷಗಳಿಂದ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ. ಅಬ್ದುಲ್ ಸಲಾಂ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.









