ಬಂಟ್ವಾಳ : ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಹಿನ್ನೆಲೆಯಲ್ಲಿ ಬಿ.ಸಿ ರೋಡ್ ನಲ್ಲಿ ಬಂಟ್ವಾಳ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರು ಈ ಚುನಾವಣೆಯಲ್ಲಿ ಪಕ್ಷದ ಗೆಲುವು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುವ ಚುನಾವಣೆಗೆ ದಿಕ್ಸೂಚಿಯಾಗಲಿದ್ದು,ಕಾಂಗ್ರೆಸ್ ಪಕ್ಷವನ್ನು ಈ ದೇಶದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ಡೊಂಬಯ ಅರಳ,ಪ್ರಮುಖರಾದ ಪ್ರಕಾಶ್
ಅಂಚನ್,ಸುದರ್ಶನ್ ಬಜ.ಗಣೇಶ್ ರೈ ಮಾಣಿ,ಪುರುಷೋತ್ತಮ ಶೆಟ್ಟಿ ವಾಮದಪದವು,ರಂಜಿತ್ ಮೈರಾ, ಯಶೋಧರ ಕರ್ಬೆಟ್ಟು,ಪವನ್ ಕುಮಾರ್ ಶೆಟ್ಟಿ,ಮನೋಜ್ ಕೋಟ್ಯಾನ್, ಮಚ್ಚೆಂದ್ರ ಸಾಲ್ಯಾನ್,ಪಷ್ಪಾನಂದ, ಯತಿನ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ , ಶಿವಪ್ರಸಾದ್ ಶೆಟ್ಟಿ, ಸಂಪತ್ ,ಸನಿಲ್, ಸಿತೇಶ್, ಕಾರ್ತಿಕ್ ಬಳ್ಳಾಲ್, ಶರ್ಮಿತ್ ಜೈನ್, ಹರೀಶ್ ಪ್ರಭು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.














