ಬಂಟ್ವಾಳ :ತಾಲೂಕಿನ ಕೊಡ್ಮಾನ್ - ಪುದು ಗ್ರಾಮದ ಕಾಪಿಕಾಡ್ ನವಜ್ಯೋತಿ ಯುವಕ ಸಂಘ ಇದರ ನವಜ್ಯೋತಿ ಸಹಾಯ ಹಸ್ತ ಯೋಜನೆ-02ರ ಫಲಾನುಭವಿ ಕೊಡ್ಮಾಣ್ ಗ್ರಾಮದ ಕಾಪಿಕಾಡ್ ನಿವಾಸಿ ನೋಣಯ್ಯ ಕುಲಾಲ್ ಇವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ರೂ 27000 ಆರ್ಥಿಕ ಸಹಾಯವನ್ನು ಸಂಘದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಹಸ್ತಾಂತರಿಸಿದರು.
ನೋಣಯ್ಯ ಕುಲಾಲ್ (70 ವರ್ಷ)ಇವರು ದೀರ್ಘ ಕಾಲದಿಂದ ಅಸ್ತಮಾ, ಶ್ವಾಸಕೋಶದ ಖಾಯಿಲೆ ಮತ್ತು
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು,ಪ್ರಸ್ತುತ ಎ.ಜೆ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.














