ಬಂಟ್ವಾಳ:ಫೆ. 11 ರಂದು ಬಿಸಿರೋಡಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ವತಿಯಿಂದ ಸರ್ಕಾರಿ ನೌಕರರಿಗೆ ಉಪಯುಕ್ತ ಕಾನೂನು ಮಾಹಿತಿ ಕಾರ್ಯಗಾರ ಮತ್ತು ವಿಶ್ರಾಂತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ, 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯ ಜರುಗಿತು.
ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಭಾಗವಹಿಸಿ, ಸಾಧಕರನ್ನು ಗೌರವಿಸಿ ಮಾತನಾಡಿ, ಸರಕಾರಿ ಅಧಿಕಾರಿಗಳು ಜೊತೆಯಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಗಲಭೆಗಳಿಲ್ಲದ ಶಾಂತಿಯುತ ಬಂಟ್ವಾಳವನ್ನು ಮಾರ್ಪಾಡು ಮಾಡಲು ಎಲ್ಲರೂ ಸಹಕಾರ ನೀಡಿದ್ದೀರಿ,ಸರಕಾರದ ಒಂದು ಭಾಗವಾಗಿ ಶಾಸಕನಾಗಿ ಪ್ರಮಾಣಿಕವಾಗಿ, ಆತ್ಮ ಸಾಕ್ಷಿಯಾಗಿ ಜನರಿಗೋಸ್ಕರ ನಿಸ್ವಾರ್ಥ ಸೇವೆ ಮಾಡಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಮಾತನಾಡಿ, ಮನುಷ್ಯನ ಸುಂದರ ಜೀವನಕ್ಕೆ ಅವಕಾಶವನ್ನು ಬಳಸಿಕೊಳ್ಳಲು ಶ್ರೀಮಂತಿಕೆಯ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ಸರಕಾರಿ ನೌಕರರಿಗೆ ಅವರು ತಿಳಿಸಿದರು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಪಿಂಚಣಿ ಯೋಜನೆ ರದ್ದಾಗಬೇಕು ಎಂಬ ಹೋರಾಟವನ್ನು ಮಾಡುತ್ತಿದ್ದು, ಅ ನೆಲೆಯಲ್ಲಿ ಕೆಲಸಗಳು ನಡೆಯುತ್ತಿದ್ದು, ನಮ್ಮ ಬೇಡಿಕೆ ಈಡೇರಿಕೆ ಸಂಘಟಿತ ಹೋರಟಕ್ಕೆ ಸಹಕಾರ ಬೇಕು. ಸರಕಾರಿ ನೌಕರರ ಹಿತವನ್ನು ಕಾಪಾಡಲು ರಾಜ್ಯಸರಕಾರಿ ನೌಕರರ ಸಂಘ ಪೂರ್ಣಪ್ರಮಾಣದಲ್ಲಿ
ತೊಡಗಿಸಿಕೊಂಡಿದೆ ಎಂದರು.
ಬಂಟ್ವಾಳ ತಹಶೀಲ್ದಾರ್ ಕೆ.ಎಸ್.ದಯಾನಂದ, ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜೋಯೆಲ್ ಲೋಬೊ, ಪ್ರಾಥಮಿಕ ಜಿಲ್ಲಾ ಉಪಾಧ್ಯಕ್ಷ ನವೀನ್ ಪಿ.ಎಸ್., ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅನೀಲ್ ಕೆ.ಪೂಜಾರಿ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ಕಾರ್ಯದರ್ಶಿ ಯತೀಶ್ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ರತ್ನಾವತಿ, ಸಂಘಟನಾ ಕಾರ್ಯದರ್ಶಿ ಶಶಿಕಾಂತ್, ಪಿಂ ನಿಲೋಜಿ ರಾವ್, ಇಂದುಶೇಖರ್, ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಸಂಘದ ಖಜಾಂಚಿ ಪುಟ್ಟರಂಗನಾಥ್ ಖಜಾಂಚಿ ಬಸಯ್ಯ ಅಲಿಮಟ್ಟಿ, ರಾಜ್ಯ ಪರಿಷತ್ ಸದಸ್ಯರ ಜೆ.ಜನಾರ್ದನ, ಉಪಾಧ್ಯಕ್ಷರುಗಳಾದ ಗಾಯತ್ರಿ ಆರ್.ಕಂಬಳಿ,ಶಮಂತ್ ಕುಮಾರ್ ಉಪಸ್ಥಿತರಿದ್ದರು.
ನ್ಯಾಯವಾದಿ ಶೈಲಜಾರಾಜೇಶ್ ಅವರು ಕಾನೂನು ಮಾಹಿತಿ ನೀಡಿದರು. ವೇದಿಕೆಯಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ತಾಲೂಕು ಘಟಕದ ಅಧ್ಯಕ್ಷ ಉಮನಾಥ ರೈ ಮೇರಾವು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ್, ಮಾ.ಅದ್ವೈತ್ ಬಾಲಪ್ರತಿಭೆಗಳು ಭಾಗವತಿಕೆಯಲ್ಲಿ ಗಣೇಶನ ಸ್ತುತಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.














