Coastal Bulletin

ಬಂಟ್ವಾಳ: ತಾಲೂಕಿನ ಕುಕ್ಕಿಪಾಡಿಗ್ರಾಮದ ಸಿದ್ದಕಟ್ಟೆ ಸಮೀಪದ ಕೋರ್ಯಾರು ಶ್ರೀದುರ್ಗಾ ಮಹಾಮ್ಮಾಯಿ ದೇವಸ್ಥಾನದ ಅವರಣದಲ್ಲಿ ಕೋರ್ಯಾರು ಕುಡುಬಿ ಸೇವಾಸಂಘದ ವತಿಯಿಂದ ನಿರ್ಮಿಸಿರುವ "ಶ್ರೀದುರ್ಗಾ ಸಭಾಭವನ", ಅನ್ನಛತ್ರ,ಪಾಕಶಾಲೆಯ ಲೋಕಾರ್ಪಣೆ ಫೆ.12 ರಂದು ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಸಭಾಭವನ,ಸಚಿವ ಸುನೀಲ್ ಕುಮಾರ್ ಅನ್ನಛತ್ರ,ಪಾಕಶಾಲೆಯನ್ನು ಮಾಜಿ ಸಚಿವ ರಮಾನಾಥ ರೈ ಉದ್ಘಾಟಿಸುವರು.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ದೀಪಪ್ರಜ್ವಲನೆಗೈಲಿದ್ದು,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸಭಾಧ್ಯಕ್ಚತೆ ವಹಿಸುವರು.ಹಲವಾರು

ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆದೇದಿನ ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ 56 ನೇ ವರ್ಷ ದ ಭಜನಾ ಮಂಗಲೋತ್ಸವ,ಸಾರ್ವಜನಿಕ ಶ್ರೀ ಶನಿಪೂಜೆ ಹಾಗೂ ಸಂಜೆ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟವು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment