ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಗಡಾಯಿಕಲ್ಲು ಏರಲು ಸಿದ್ಧರಾಗಿದ್ದಾರೆ ದಿ ಮಂಕಿ ಮ್ಯಾನ್ ಎಂದೇ ಪ್ರಖ್ಯಾತಿ ಪಡೆದಿರುವ ಚಿತ್ರದುರ್ಗದ ಜ್ಯೋತಿರಾಜ್.
ಕರ್ನಾಟಕದ ಚಿತ್ರದುರ್ಗದ ಮೂಲದವರಾಗಿದ್ದ ಜ್ಯೋತಿ ರಾಜ್, ಪರ್ವತಾರೋಹಿಯಾಗಿದ್ದಾರೆ. “ಕೋತಿ ರಾಜು” ಅಥವಾ ಮಂಕಿ ಕಿಂಗ್” ಎಂದು ಕರೆಯಲ್ಪಡುವ ರಾಜ್ ಅವರು ಚಿತ್ರದುರ್ಗ ಕೋಟೆಯನ್ನು ಹಾಗೂ ಜೋಗ ಜಲಪಾತವನ್ನು ಸುರಕ್ಷತಾ ಪರಿಕರಗಳಿಲ್ಲದೆ ಕೇವಲ ಕೈ ಸಹಾಯದಿಂದಲೇ ಏರುವ ಮೂಲಕ ತಮ್ಮ ಅವಿರತ ಸಾಧನೆ ತೋರಿದ್ದಾರೆ.
ಇದೀಗ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಟಿಪ್ಪು ವಶದಲ್ಲಿದ್ದ ಕೋಟೆಯಾದ 1700
ಅಡಿಯಿರುವ ಗಡಾಯಿಕಲ್ಲನ್ನು ವನ್ಯ ಜೀವಿ ವಿಭಾಗದಿಂದ ಅನುಮತಿಗಾಗಿ ಬಾಂಡ್ ಬರೆದು ಫೆ.12 ಏರಲಿದ್ದಾರೆ. ಈಗಾಗಲೆ ತಮ್ಮ 8 ಮಂದಿಯ ತಂಡದೊಂದಿಗೆ ಆಗಮಿಸಿರುವ ಅವರು ಶುಕ್ರವಾರದಿಂದಲೆ ಕಾರ್ಯೋನ್ಮುಖರಾಗಿದ್ದಾರೆ. ಈಗಾಗಲೆ ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆಯಲಾಗಿದ್ದು, ಶಾಸಕ ಹರೀಶ್ ಪೂಂಜ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು ಮೂರು ದಿನ ಧರ್ಮಸ್ಥಳದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.














