Coastal Bulletin

ಬಂಟ್ವಾಳ:ದೇವಾಲಯಗಳಲ್ಲಿ ಪ್ರಧಾನ ದೇವರ ಉತ್ಸವದಿಂದ ಪರಿವಾರ ದೇವತೆಗಳು ಕೂಡಾ ಸಂತುಷ್ಟರಾಗುತ್ತಾರೆ. ಗಾಯತ್ರಿ ದೇವರ ಆರಾಧನೆ ಜೊತೆಗೆ ಮಹಾಗಣಪತಿ ಮತ್ತು ಗುರು ರಾಘವೇಂದ್ರ ಸ್ವಾಮಿ ಬಿಂಬ ಪ್ರತಿಷ್ಠೆಯಿಂದ ಕ್ಷೇತ್ರದ ಶಕ್ತಿ ಹೆಚ್ಚಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ವಗ್ಗ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಗಾಯತ್ರಿದೇವಿ ದೇವಸ್ಥಾನಕ್ಕೆ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ಸಂಜೆ ಭೇಟಿ ನೀಡಿ ಅವರು ಆಶೀರ್ವಚನ ನೀಡಿದರು.

ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ, ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು

ಸಪಲ್ಯ ಪಾಣೆಮಂಗಳೂರು, ಪ್ರಮುಖರಾದ ಪ್ರಕಾಶ್ ಉಡುಪ ಕೆಲಮಂಗಲ, ಕೆ.ಬಾಬು ಸಪಲ್ಯ, ಎಂ.ಬೂಬ ಸಪಲ್ಯ, ನಾಗೇಶ ಕಲ್ಲಡ್ಕ, ಉಮೇಶ ಬೋಳಂತೂರು, ಮೋಹನ್ ಕೆ.ಶ್ರೀಯಾನ್ ರಾಯಿ, ಜಗದೀಶ ಕುಂದರ್, ಜಯಾನಂದ ಪೆರಾಜೆ, ಅಭಿಷೇಕ್ ಪಿಲಿಂಗಾಲು, ಕೇಶವ ಶೆಟ್ಟಿ ಕಾಡಬೆಟ್ಟು, ಚಂದಪ್ಪ ಮೂಲ್ಯ, ದಿನೇಶ ಕಾಡಬೆಟ್ಟು, ಚೇತನ್ ಕಾಡಬೆಟ್ಟು, ಚಿದಾನಂದ ಪಿಲಿಂಗಾಲು ಮತ್ತಿತರರು ಇದ್ದರು.

Leave a Comment