ರಾಮಲ್ ಕಟ್ಟೆ: ಎಳೆಯರ ಬಳಗ (ರಿ) 49ನೇ ವಾರ್ಷಿಕೋತ್ಸವ ಸಮಾರಂಭ.

Coastal Bulletin
ರಾಮಲ್ ಕಟ್ಟೆ: ಎಳೆಯರ ಬಳಗ (ರಿ) 49ನೇ ವಾರ್ಷಿಕೋತ್ಸವ ಸಮಾರಂಭ.

ಬಂಟ್ವಾಳ :ಎಳೆಯರ ಬಳಗ (ರಿ) ರಾಮಲ್ ಕಟ್ಟೆ, ಎಳೆಯರ ಬಳಗ ಮಹಿಳಾ ಮಂಡಳಿ ಹಾಗೂ ಎಳೆಯರ ಬಳಗ ಭಜನಾ ಮಂಡಳಿಯ ಆಶ್ರಯದಲ್ಲಿ ಸಂಸ್ಥೆಯ 49ನೇ ವಾರ್ಷಿಕೋತ್ಸವ ಸಮಾರಂಭ ಅದ್ದೂರಿಯಾಗಿ ರಾಮಲ್ ಕಟ್ಟೆಯಲ್ಲಿ ಜರುಗಿತು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ. ರಮನಥ ರೈ ಭಾಗವಹಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ ಸುಬ್ರಹ್ಮಣ್ಯ ಭಟ್ ವಹಿಸಿದ್ದರು. 


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಮಂದಿ ಸಾಧಕರನ್ನು, ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ 6 ವಿದ್ಯಾರ್ಥಿಗಳನ್ನು ಸನ್ಮಾನಿಸ ಲಾಯಿತು ಹಾಗೂ 43 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು 

ವೇದಿಕೆಯಲ್ಲಿ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ತಾಲೂಕು ಪಂ ಮಾಜಿ ಸದಸ್ಯ ಗಣೇಶ್ ಸುವರ್ಣ, ತುಂಬೆ ಶ್ರೀ ಶಾರದಾ ರಜತ ಮಹೋತ್ಸವದ ಅಧ್ಯಕ್ಷ ರಾಘವ ಪೆರ್ಲಬೈಲ್, ಜ್ಯೋತಿಷಿ ಅನಿಲ್ ಪಂಡಿತ್, ತುಂಬೆ

ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಕೇಶವ, ನಿಸಾರ್ ಅಹ್ಮದ್ ವಳವೂರ್, ಎಳೆಯರ ಬಳಗದ ಅಧ್ಯಕ್ಷ ಪೂಜೇಶ್ ಆಚಾರ್ಯ, ಮಹಿಳಾ ಮಂಡಳಿಯ ಅಧ್ಯಕ್ಷೆ ವಸಂತಿ ವಸಂತ ಉಪಸ್ಥಿತರಿದ್ದರು.


ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು ನಿಶ್ಮಿತಾ ಅಭಿಷೇಕ್ ಸ್ವಾಗತಿಸಿ,ನವೀನ್ ರಾಮಲ್ ಕಟ್ಟೆ ಧನ್ಯವಾದವಿತ್ತು, ಮಲ್ಲಿಕಾ ಧನಂಜಯ್ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ರೆಂಜೋಡಿ ಹಾಗೂ ಅನಿಲ್ ರಾಮಲ್ ಕಟ್ಟೆ ಸಹಕರಿಸಿದರು.

ಬಳಿಕ ರಂಗ ತರಂಗ ಕಾಪು ತಂಡದಿಂದ "ಶೋಬಾಜಿ"ನಾಟಕ ಪ್ರದರ್ಶನಗೊಂಡಿತು.

ಅಂದು ಬೆಳಿಗ್ಗೆ ದೀಪ ಪ್ರಜ್ವಲನೆಗೊಂಡು, ಗಣಹೋಮ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಇದೇ ವೇಳೆ ರಾಮಲ್ ಕಟ್ಟೆಯ ಸಮಸ್ತ ಮುಸ್ಲಿಂ ಬಂಧುಗಳು ರಾತ್ರಿಯ ಉಪಹಾರವನ್ನು ವ್ಯವಸ್ಥೆ ಮಾಡಿ ಸೌಹಾರ್ದತೆ ಮೆರೆದರು.

Leave a Comment