ಫರಂಗಿಪೇಟೆ ಜಂಕ್ಷನ್ ಬಳಿ ಅನಧಿಕೃತ ಗೂಡಂಗಡಿಗಳ ತೆರವು, ಸಾರ್ವಜನಿಕರ ಪ್ರಶಂಸೆ.

Coastal Bulletin
ಫರಂಗಿಪೇಟೆ ಜಂಕ್ಷನ್ ಬಳಿ ಅನಧಿಕೃತ ಗೂಡಂಗಡಿಗಳ ತೆರವು, ಸಾರ್ವಜನಿಕರ ಪ್ರಶಂಸೆ.

ಬಂಟ್ವಾಳ :ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆಯ ಜಂಕ್ಷನ್ ಬಳಿ ಫುಟ್ ಪಾತ್ ಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳನ್ನು ಪುದು ಗ್ರಾ ಪಂ ಅಧ್ಯಕ್ಷ ರಾಮ್ಲಾನ್ ಮಾರಿಪಲ್ಲ ಹಾಗೂ ಪಿ ಡಿ ಒ ಡಾ.ಸ್ಮೃತಿ ಇವರ ನೇತೃತ್ವದಲ್ಲಿ ಫರಂಗಿಪೇಟೆ ಪೊಲೀಸ್ ಠಾಣಾ ಸಿಬ್ಬಂದಿಗಳ ಸಹಕಾರದಿಂದ ತೆರವುಗೊಳಿಸಿ ಸಾರ್ವಜನಿಕರಿಗೆ ನಡೆದಾಡಲು ಅನುಕೂಲ ಮಾಡಿದ ಪಂಚಾಯತ್ ನ ಈ ದಿಟ್ಟ ಕ್ರಮಕ್ಕೆ ಸಾರ್ವಜನಿಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿ ಪುದು ಪಂ ನ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದ್ದಾರೆ.

ಸಾರ್ವಜನಿಕರಿಂದ ಬಂದ ದೂರಿನ ಮನವಿಯನ್ನಾದರಿಸಿ ಈಗಾಗಲೇ ಅಂಗಡಿ ಇದ್ದು ಅದನ್ನು ಹೆಚ್ಚುವರಿಯಾಗಿ ಫುಟ್ ಪಾತ್ ಹಾಗೂ ಚರಂಡಿಗೆ ಬದಿಗೆ ವಿಸ್ತರಿಸಿ ಸಾರ್ವಜನಿಕರಿಗೆ ನಡೆದಾಡಲು ಅನಾನುಕೂಲವಾಗುವ ರೀತಿಯಲ್ಲಿ ವ್ಯಾಪಾರ ನಡೆಸುತಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಸಂಬಂಧಪಟ್ಟವರಲ್ಲಿ ಪಂಚಾಯತ್ ಹಲವು ಬಾರಿ ಮನವಿ ಮಾಡಿದರೂ ತೆರವಾಗದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. 

ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ, ಬಸ್ ಸ್ಟಾಂಡ್ ಹತ್ತಿರ ಅಡ್ಡಾದಿಡ್ಡಿ ವಾಹನ ನಿಲ್ಲಿಸುವ ಹಾಗೂ ವಿರುದ್ಧ ದಿಕ್ಕಿನಲ್ಲಿ ಸಾಗಿ ಬಂದು ಪ್ರಯಾಣಿಕರಿಗೆ ತೊಂದರೆ ಕೊಡುವ ವಾಹನ ಗಳಿಗೂ ಕಡಿವಾಣ ಬೀಳಲಿ

ಎನ್ನುವ ನೀರಿಕ್ಷೆಯಲ್ಲಿದ್ದಾರೆ.

ಫುಟ್ ಪಾತ್ ಗೆ ಇಂಟರ್ಲಾಕ್ ಅಳವಡಿಕೆಗೆ ಮನವಿ :

ಪಾದಚಾರಿಗಳಿಗೆ, ಪ್ರಯಾಣಿಕರಿಗೆ ಪೇಟೆಯ ಫುಟ್ ಪಾತ್ಗಳಲ್ಲಿ ಸುವ್ಯವಸ್ಥಿತವಾಗಿ ನಡೆದಾಡುವ ನಿಟ್ಟಿನಲ್ಲಿ ಇಂಟರ್ಲಾಕ್ ಅಳವಡಿಸುವ ಯೋಜನೆ ಇದ್ದು, ಜಿ ಪಂ ಮಾಜಿ ಸದಸ್ಯ ಉಮರ್ ಫಾರೂಕ್ ಮೂಲಕ ಸ್ಥಳೀಯ ಶಾಸಕರು ಹಾಗೂ ವಿಧಾನಸಭಾ ಸ್ಪೀಕರ್ ಆಗಿರುವ ಯು ಟಿ ಖಾದರ್ ರವರಿಗೆ ಇದರ ಬಗ್ಗೆ ಮನವಿ ಮಾಡಲಾಗಿದ್ದು ಆದಷ್ಟು ಬೇಗ ಇಂಟರ್ಲಾಕ್ ಅಳವಡಿಸಲಾಗುವುದು ಹಾಗೂ ಸ್ವಚ್ಚ, ಸುಂದರ ಫರಂಗಿಪೇಟೆಗೆ ಆದ್ಯತೆ ನೀಡಲಾಗುವುದು ಎಂದು ಪುದು ಪಂ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Leave a Comment