ಸಂಗಬೆಟ್ಟು: ದ ಕ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ 14ನೇ ಶಾಖೆ ಉದ್ಘಾಟನೆ. ಗ್ರಾಹಕರ ಪ್ರೀತಿ, ವಿಶ್ವಾಸ, ಸಹಕಾರದಿಂದ ಸಹಕಾರಿ ಸಂಸ್ಥೆಯ ಅಭಿವೃದ್ಧಿ ಸಾಧ್ಯ: ಬಿ.ರಮಾನಾಥ ರೈ

Coastal Bulletin
ಸಂಗಬೆಟ್ಟು: ದ ಕ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ 14ನೇ ಶಾಖೆ ಉದ್ಘಾಟನೆ. ಗ್ರಾಹಕರ ಪ್ರೀತಿ, ವಿಶ್ವಾಸ, ಸಹಕಾರದಿಂದ ಸಹಕಾರಿ ಸಂಸ್ಥೆಯ ಅಭಿವೃದ್ಧಿ ಸಾಧ್ಯ: ಬಿ.ರಮಾನಾಥ ರೈ

ಬಂಟ್ವಾಳ: ದ.ಕ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಬಿ.ಸಿ.ರೋಡಿನ ಕೈಕಂಬದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಇದರ ನೂತನ 14ನೇ ಶಾಖೆಯು ಸಂಗಬೆಟ್ಟು ಸುದರ್ಶನ್ ಕಾಂಪ್ಲೆಕ್ಸ್ ನಲ್ಲಿ ನ. 8ರಂದು ಶನಿವಾರ ಶುಭಾರಂಭಗೊಂಡಿತು.

ಮಾಜಿ ಸಚಿವ ಬಿ.ರಮಾನಾಥ ರೈ ಅವರು ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಊರಿನವರ ಸಹಕಾರ ವಿದ್ದರೆ ಮಾತ್ರ ಸಹಕಾರಿ ಸಂಘವು ಎತ್ತರಕ್ಕೆ ಬೆಳೆಯಲು ಸಾಧ್ಯ, ವಿಶ್ವಾಸ ಮತ್ತು ಪ್ರಾಮಾಣಿಕ ವ್ಯವಹಾರದಿಂದ ವರ್ತಕರ ಸಹಕಾರಿ ಸಂಸ್ಥೆ ಜಿಲ್ಲಾ ಮಟ್ಟಕ್ಕೆ ವಿಸ್ತರಣೆಗೊಂಡು ಬಲಿಷ್ಠ ಸಂಸ್ಥೆಯಾಗಿ ಬೆಳೆಯುತ್ತಿದೆ, ಗ್ರಾಹಕರ ಪ್ರೀತಿ ವಿಶ್ವಾಸ, ಸಹಕಾರ ಇದ್ದಾಗ ಸಂಸ್ಥೆಯು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. 

ಪೂಂಜಾ ಕ್ಷೇತ್ರದ ಕೃಷ್ಣಪ್ರಸಾದ್ ಆಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಮಂಗಳೂರು ಧವಳ ಕೊ ಅಪ್ ಸೊಸೈಟಿ ಅಧ್ಯಕ್ಷ ಸುದರ್ಶನ್ ಜೈನ್ ಅವರು ಭದ್ರತಾ ಕೊಠಡಿ ಉದ್ಘಾಟಿಸಿ, ಜಿಲ್ಲೆಯ ಎಲ್ಲಾ ಸಹಕಾರಿ ಸಂಸ್ಥೆಗಳು ಗ್ರಾಹಕರೊದಿಗೆ ನಂಬಿಕೆ, ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವುದರಿಂದಾಗಿ ಲಾಭದಾಯಕವಾಗಿ ಮುನ್ನಡೆಯಲು ಸಾಧ್ಯವಾಗಿದೆ. ಜನ ಸಾಮಾನ್ಯರಿಗೂ ಸಹಕಾರಿ ಸಂಘಗಳಲ್ಲಿ ಸುಲಭವಾಗಿ ಸೇವೆಗಳು ದೊರೆಯುತ್ತಿದೆ ಎಂದರು. ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಸಂಘದ ಪಾಸ್‌ ಪುಸ್ತಕ ವಿತರಿಸಿದರು.

ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷ ರಾಜೀವಿ ಕಂಪ್ಯೂಟರ್ ಉದ್ಘಾಟಿಸಿ ಶುಭಹಾರೈಸಿದರು. ವಿಟ್ಲಟೀಚರ್ಸ್ ಕೋ-ಆಪ್ ಸೊಸೈಟಿನ ಅಧ್ಯಕ್ಷ ರಮೇಶ್ ನಾಯಕ್ ರಾಯಿ ನಿರಖು ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಮಾಜಿ ತಾ.ಪಂ. ಸದಸ್ಯ, ಉದ್ಯಮಿ ಆರ್ಕಕೀರ್ತಿ ಇಂದ, ಸಾವಯವ ಕೃಷಿ ಯೋಜನೆ ಆಡಳಿತ ನಿರ್ದೇಶಕ ಮೋಹನ್ ಗೌಡ, ಸಿದ್ದಕಟ್ಟೆ ಹಾಲು ಉ.ಸ. ಸಂಘದ ಅಧ್ಯಕ್ಷ ರತ್ನಕುಮಾ‌ರ್ ಚೌಟ, ಹಿರಿಯ ಸಹಕಾರಿ, ಪುರೋಹಿತ ಲಕ್ಷ್ಮೀನಾರಾಯಣ ಆಚಾರ್ಯ ಅವರು

ಅತಿಥಿಯಾಗಿ ಭಾಗವಹಿಸಿ, ಶುಭಹಾರೈಸಿದರು.

ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಬಂಟ್ವಾಳ ಪರಿಸರಕ್ಕೆ ಮಾತ್ರ ಸೀಮಿತವಾಗಿದ್ದ ಸಂಸ್ಥೆ ಪ್ರಸ್ತುತ ದ.ಕ.ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿ ಸಹಕಾರಿ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದೆ. ಸಂಘವು ಸುಮಾರು 80 ಕೋ. ರೂ. ದುಡಿಯುವ ಬಂಡವಾಳದೊಂದಿಗೆ ವ್ಯವಹಾರ ಮಾಡುತ್ತಿದ್ದು, 2024-25ನೇ ಸಾಲಿನಲ್ಲಿ ಒಟ್ಟು 78 ಕೋಟಿ ರೂ. ಸಾಲ ವಿತರಿಸಿದೆ. ವಾರ್ಷಿಕ ವಹಿವಾಟು 373 ಕೋ. ನಡೆದಿದೆ ಎಂದರು. ಸಂಗಬೆಟ್ಟುವಿನಲ್ಲಿ ಸಂಸ್ಥೆಯಿಂದ ಬಸ್ ತಂಗುದಾಣ ನಿರ್ಮಾಣ ಮಾಡಲಾಗುವುದು. ಬೆಳ್ತಂಗಡಿಯಲ್ಲಿ ನೂತನ ಶಾಖೆ ತೆರೆಯುವ ಯೋಜನೆ ಇದೆ ಎಂದರು.

ಸಂಗಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಕುಲಾಲ್, ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊತ್ತೇಸರರಾದ ಚಂದ್ರಹಾಸ ಶೆಟ್ಟಿಗಾರ್, ಪ್ರಧಾನ ಆರ್ಚಕ ಪ್ರಭಾಕರ ಐಗಳ್, ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಅಗರಿ, ನಿರ್ದೇಶಕ ರವೀಂದ್ರ, ಜೆ.ಗಜೇಂದ್ರ ಪ್ರಭು, ರಾಜೇಶ್ ಬಿ., ಸುಧಾಕರ ಸಾಲ್ಯಾನ್, ನಾರಾಯಣ ಸಿ ಪೆರ್ನೆ, ಜಯರಾಜ್, ಲೋಕೇಶ್ ಸುವರ್ಣ, ಹೇಮಂತ್ ಕುಮಾರ್ ಜೈನ್, ಬಟ್ಯಪ್ಪ ಶೆಟ್ಟಿ ಸ್ಪಷ್ಟ ರಾಜ್, ವಿಜಯ ಕುಮಾರಿ ಇಂದ್ರ, ಕಟ್ಟಡದ ಮಾಲಕ ನಾಗೇಶ್ ಶೆಟ್ಟಿ ಗಾರ್, ಸಂಘದ ಸಿಇಒ ಅಜಿತ್ ಕುಮಾರ್ ಉಪಸ್ಥಿತರಿದ್ದರು. 

ಬಂಟ್ವಾಳ ಶಾಖೆಯ ಸ್ವಪ್ನಾಚಂದ್ರಪ್ರಭಾ ಠೇವಣಿದಾರರ ಪಟ್ಟಿ ವಾಚಿಸಿದರು.ನಿರ್ದೇಶಕ ಮೈಕಲ್ ಡಿಸೋಜಾ ಸ್ವಾಗತಿಸಿ, ಸಂಗಬೆಟ್ಟು ಶಾಖೆಯ ಪ್ರಬಂಧಕ ಮೋಹನ್ ಜಿ.ಮೂಲ್ಯ ವಂದಿಸಿ, ನಿರ್ದೇಶಕ ಡಾ.ಸಂದೀಪ್ ಕುಮಾರ್ ನಿರೂಪಿಸಿದರು

Leave a Comment