ಬಂಟ್ವಾಳದಲ್ಲಿ ತಾಲೂಕು ಮಟ್ಟದ ಕನಕದಾಸರ ಜಯಂತಿ ಆಚರಣೆ. ಕನಕದಾಸರು ಶಕ್ತಿ ಮಾತ್ರವಲ್ಲ ಭಕ್ತಿಯ ವ್ಯಕ್ತಿಯಾಗಿ ಮೇಲ್ಪಂಕ್ತಿಯಾಗಿದ್ದಾರೆ: ಬೇಬಿ ಕುಂದರ್

Coastal Bulletin
ಬಂಟ್ವಾಳದಲ್ಲಿ ತಾಲೂಕು ಮಟ್ಟದ ಕನಕದಾಸರ ಜಯಂತಿ ಆಚರಣೆ. ಕನಕದಾಸರು ಶಕ್ತಿ ಮಾತ್ರವಲ್ಲ ಭಕ್ತಿಯ ವ್ಯಕ್ತಿಯಾಗಿ ಮೇಲ್ಪಂಕ್ತಿಯಾಗಿದ್ದಾರೆ: ಬೇಬಿ ಕುಂದರ್

ಬಂಟ್ವಾಳ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಂಟ್ವಾಳ ಆಡಳಿತ ಸೌಧದ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. ಬೂಡ ಅಧ್ಯಕ್ಷರಾದ ಬೇಬಿ ಕುಂದರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿ ಯಾವುದೇ ಜಯಂತಿ, ಆಚರಣೆಗಳು ನಾಲ್ಕು ಗೋಡೆಗಳ ಮಧ್ಯೆ ನಡೆಯದೆ ಯುವ ಸಮುದಾಯಕ್ಕೆ ದಾರ್ಶನಿಕ ಪುರುಷರ ಜೀವನ ಚರಿತ್ರೆಯ ದರ್ಶನವಾಗುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಕಾರ್ಯಕ್ರಮಗಳು ನಡೆಯಬೇಕು ಎಂದು ಅವರು ತಿಳಿಸಿದರು. ಇಂತಹ ಮಹಾಪುರುಷರಿಗೆ ಗೌರವ ಸೂಚಿಸುವ ಪ್ರಕಾರ ಕಾರ್ಯಕ್ರಮಗಳು ನಡೆಯಬೇಕು.ಕನಕದಾಸರು ಕೇವಲ ಶಕ್ತಿ ಮಾತ್ರವಲ್ಲ ಭಕ್ತಿಯ ವ್ಯಕ್ತಿಯಾಗಿ ನಮಗೆ ಮೇಲ್ಪಂಕ್ತಿಯಾಗಿದ್ದಾರೆ ಎಂದು

ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಅವರು ಉಪಸ್ಥಿತರಿದ್ದರು.ಉಪ ತಹಶಿಲ್ದಾರ್ ನವೀನ್ ಬೆಂಜನಪದವು ಕನಕ ಜಯಂತಿ ಆಚರಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಉಪಸ್ಥಿತರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್ ಸ್ವಾಗತಿಸಿ ವಂದಿಸಿದರು.

Leave a Comment