ವಿಟ್ಲ: ದ್ವಿತೀಯ ಪಿಯುಸಿ ಫಲಿತಾಂಶ; ವಿಠಲ ಪದವಿಪೂರ್ವ ವಿದ್ಯಾರ್ಥಿನಿ ಕು. ಯಜ್ಞಶ್ರೀ 97.80 % ನೊಂದಿಗೆ ಕಾಲೇಜ್ ಗೆ ಪ್ರಥಮ

Coastal Bulletin
ವಿಟ್ಲ: ದ್ವಿತೀಯ ಪಿಯುಸಿ ಫಲಿತಾಂಶ; ವಿಠಲ ಪದವಿಪೂರ್ವ ವಿದ್ಯಾರ್ಥಿನಿ ಕು. ಯಜ್ಞಶ್ರೀ 97.80 % ನೊಂದಿಗೆ ಕಾಲೇಜ್ ಗೆ ಪ್ರಥಮ

ವಿಟ್ಲ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಠಲ ಪದವಿಪೂರ್ವ ಕಾಲೇಜು ಒಟ್ಟು 86.7% ಫಲಿತಾಂಶ ಪಡೆದುಕೊಂಡಿದೆ.

2025 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಠಲ ಪದವಿಪೂರ್ವ ಕಾಲೇಜಿನ 301 ವಿದ್ಯಾರ್ಥಿಗಳು ಹಾಜರಾಗಿದ್ದು, 31 ವಿಶಿಷ್ಟ ಶ್ರೇಣಿಯಲ್ಲಿ, 152 ಪ್ರಥಮ ಶ್ರೇಣಿಯಲ್ಲಿ ಹಾಗೂ 63 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಒಟ್ಟು 86.7% ಫಲಿತಾಂಶ ದಾಖಲಾಗಿದೆ.

ವಿಜ್ಞಾನ ವಿಭಾಗದಲ್ಲಿ ಕುಮಾರಿ ಯಜ್ಞಶ್ರೀ 587, ವಾಣಿಜ್ಯ ವಿಭಾಗದಲ್ಲಿ ಕುಮಾರಿ ಕೀರ್ತಿ

ಶೆಟ್ಟಿ ಕೆ 561 ಮತ್ತು ಕಲಾ ವಿಭಾಗದಲ್ಲಿ ಕುಮಾರಿ ತಸ್ಲೀಯ 547 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿ ಕೀರ್ತಿ ತಂದಿರುತ್ತಾರೆ. ಯಜ್ಞಶ್ರೀ ಇವರು ಬಾಯಾರು ಬಾಲಕೃಷ್ಣ ಕುಲಾಲ್ ಹಾಗೂ ಮಾಲತಿ ಇವರ ಪುತ್ರಿ. 

ಉತ್ತಮ ಫಲಿತಾಂಶ ದಾಖಲಿಸುವಲ್ಲಿ ಶ್ರಮಿಸಿದ ಎಲ್ಲಾ ಉಪನ್ಯಾಸಕರನ್ನು, ಕೀರ್ತಿ ತಂದ ವಿದ್ಯಾರ್ಥಿಗಳನ್ನು ವಿಠಲ ಎಜುಕೇಶನ್ ಸೊಸೈಟಿಯು ಅಭಿನಂದಿಸಿದೆ.

Leave a Comment