ಬಂಟ್ವಾಳ :ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಶಿಬಿರದಲ್ಲಿ ಕಲಿತ ಶಿಕ್ಷಣ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಲಿ ಎಂದರು.7 ದಿನಗಳ ಕಾಲ ಮನೆ ಬಿಟ್ಟು, ಶ್ರಮದಾನದಿಂದ ಹಿಡಿದು ಊಟ ತಯಾರಿಸುವರೆಗಿನ ಶಿಕ್ಷಣ ಮುಂದಿನ ಬಾಳಿಗೆ ಪೂರಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಹಿರಿಯರಾದ ಕೃಷ್ಣಭಟ್ ಮೀರಾವನ, ಅಶ್ವಥ್ ಪಿ,ಸುಂದರ ಭಟ್ ಮುದ್ರಾಜೆ, ಸುಬ್ರಹಣ್ಯ ಭಟ್ ಬಡೆಕ್ಕಿಲ, ಸೀತಾರಾಮ ಭಟ್ ಬಡೆಕ್ಕಿಲ, ಚಂದ್ರಶೇಖರ ಭಟ್ ಬಡೆಕ್ಕಿಲ, ಈಶ್ವರ ಸಪಲ್ಯ, ಕೇಶವ ಗೌಡ ಕಾಂತುಕೋಡಿ,ಧರ್ಣಪ್ಪ ಗೌಡ , ಕಾಂತಪ್ಪ ಗೌಡ, ಸ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕೆ ಎನ್, ಸಹ ಶಿಬಿರಾಧಿಕಾರಿ
ಕು. ದೀಕ್ಷಿತಾ, ಉಪನ್ಯಾಸಕರಾದ ಸುಕನ್ಯಾ ,ಕವಿತಾ , ರಕ್ಷಾ, ಪ್ರಸನ್ನ ಉಪಸ್ಥಿತರಿದ್ದರು.
ಶಿಬಿರದ ಅನುಭವಗಳನ್ನು ವಿದ್ಯಾರ್ಥಿಗಳಾದ ಮನ್ವಿತಾ, ಸಂಪತ್, ಪುನೀತಾ ಹಂಚಿಕೊಂಡರು. ಹಿರಿಯರಾದ ಶಿವರಾಂ ಭಟ್ ತನ್ನ ಅನುಭವವನ್ನು ಹೇಳಿದರು.ಶಿಬಿರಾಧಿಕಾರಿ ಯತಿರಾಜ್ ಪಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿ ಮನ್ವಿತಾ ಪ್ರಾರ್ಥನೆ ಹಾಡಿ, ಚೈತ್ರಾ ಪಿ ವಂದಿಸಿ, ವಿಸ್ಮಿತ ಕಾರ್ಯಕ್ರಮ ನಿರೂಪಿಸಿದರು














