ಹಿರಿಯ ಪತ್ರಕರ್ತ,ಸಾಹಿತಿ ಜಯಾನಂದ ಪೆರಾಜೆಗೆ ಕನ್ನಡ ಪಯಸ್ವಿನಿ ಗಡಿನಾಡ ಪ್ರಶಸ್ತಿ -2024

Coastal Bulletin
ಹಿರಿಯ ಪತ್ರಕರ್ತ,ಸಾಹಿತಿ ಜಯಾನಂದ ಪೆರಾಜೆಗೆ ಕನ್ನಡ ಪಯಸ್ವಿನಿ ಗಡಿನಾಡ ಪ್ರಶಸ್ತಿ -2024

ಬಂಟ್ವಾಳ: ಜೆಸಿಐ ಅಂತಾರಾಷ್ಟ್ರೀಯ ಸಂಸ್ಥೆಯ ವ್ಯಕ್ತಿತ್ವ ವಿಕಸನ ರಾಜ್ಯ ತರಬೇತುದಾರ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತರು, ಹಿರಿಯ ಪತ್ರಕರ್ತ,ಸಾಹಿತಿ ಜಯಾನಂದ ಪೆರಾಜೆ ಕನ್ನಡ ಪಯಸ್ವಿನಿ ಗಡಿನಾಡ ಪ್ರಶಸ್ತಿ -2024 ಆಯ್ಕೆ ಯಾಗಿದ್ದಾರೆ.

ಕನ್ನಡ ಭವನ ಮತ್ತು ಗ್ರಂಥಾಲಯ (ರಿ )ಕನ್ನಡ ಭವನ ಪ್ರಕಾಶನ ಕಾಸರಗೋಡು ಮತ್ತು ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕಥಾಬಿಂದು ಪ್ರಕಾಶನ ಮಂಗಳೂರು ಇದರ ವತಿಯಿಂದ ಪಯಸ್ವಿನಿ ಪ್ರಶಸ್ತಿ ೨೦೨೪ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಕನ್ನಡ ಭವನ ಕಾಸರಗೋಡಿನಲ್ಲಿ 10.3.24 ರಂದು ಭಾನುವಾರ ೧೦ಗಂಟೆಗೆ ನಡೆಯಲಿರುವ ಕೇರಳಮತ್ತು ಕರ್ನಾಟಕ ಕನ್ನಡ ಸಂಸ್ಕೃತಿ ಗಡಿನಾಡ ಉತ್ಸವ -2024 ರಲ್ಲಿ ಕನ್ನಡ ಸಾಹಿತ್ಯ

ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಕರ್ನಾಟಕ ಹಾಗೂ ಕೇರಳದ ಗಣ್ಯರಾದ ಪಿ.ವಿ.ಪ್ರದೀಪ ಕುಮಾರ್ , ಹಿರಿಯ ಕವಿಗಳಾದ ವಿ.ಜಿ.ಕುಳಮರ್ವ,ರಾಧಾಕೃಷ್ಣ ಉಳಿಯತಡ್ಕ ಮೊದಲಾದವರ ಉಪಸ್ಥಿತಿಯಲ್ಲಿ ಕವಿಗೋಷ್ಠಿ ಹಾಗೂ ವಿವಿಧ ಕಾರ್ಯ ಕ್ರಮಗಳು ನಡೆಯಲಿವೆ ಎಂದು ಕನ್ನಡ ಭವನ ಅಧ್ಯಕ್ಷ ವಾಮನ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment