ಬಂಟ್ವಾಳ :ರೋಟರಿ ಕ್ಲಬ್ ಮೊಡಂಕಾಪು, ದಕ್ಷಿಣ ಕನ್ನಡ ಜಿಲ್ಲಾ ಸಂಚಾರಿ ನೇತ್ರ ಘಟಕ ಜಿಲ್ಲಾ ಆಸ್ಪತ್ರೆ , ಪ್ರಾಥಮಿಕ ಆರೋಗ್ಯ ಕೇಂದ್ರ ಪುದು ಕಳ್ಳಿಗೆ ಗ್ರಾಮ ಪಂಚಾಯತ್, ಲಕ್ಷ್ಮಿವಿಷ್ಣು ಸೇವಾ ಸಂಘ ಜಾರಂದಗುಡ್ಡೆ, ಸೀನಿಯರ್ ಛೇಂಬರ್ ಬಿ.ಸಿ.ರೋಡ್( ಬಂಟ್ವಾಳ ನೇತ್ರಾವತಿ ಸಂಗಮ) ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣಾ ಶಿಬಿರವು ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಡಿ.8ರಂದು ಶುಕ್ರವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ದುರ್ಗಾ ಕ್ಲಿನಿಕ್ ಗಡಿಯಾರ ಮಾಣಿ ಡಾ| ಮನೋಹರ್ ರೈ ಮಾಣಿ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ ಎಂದರು.
ವೆನ್ ಲಾಕ್ ನ ನೇತ್ರಾದಿಕಾರಿ ಡಾ| ಅನಿಲ್ ರಾಮಾನುಜಂ ಕಣ್ಣಿನ ದಾನ ಮತ್ತು ಅಂಗಾಂಗ ದಾನದ ಮಹತ್ವ ತಿಳಿಸಿದರು.
ಮುಖ್ಯ ಅತಿಥಿಗಳಾಗಿ,ಉದ್ಯಮಿ ಅರುಣ್ ಶರ್ಮ ಪನ್ನಡ್ಕ, (ಪ್ರೋಪ್ರೈಟರ್ ಪ್ರೈಡ್ ಇನ್ ಕಾರ್ಪೋರೇಷನ್), ದಿನಕರ್ ಬಂಜನ್ ಬರೆ, (ಉದ್ಯಮಿ ಮುಂಬಯಿ) , ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಸಾಮಾಜಿಕ ಕಾರ್ಯಕರ್ತರಾದ ಶಶಿಪ್ರಭ ಗುತ್ತಹಿತ್ತಿಲು, ರೋ ಕಾರ್ಯದರ್ಶಿ ಅಲೆಕ್ಸಾಂಡರ್ ಲೋಬೊ, ಸೀನಿಯರ್ ಛೇ. ಉಪಾಧ್ಯಕ್ಷರುಗಳಾದ ಡಾ|
ಆಧಿರಾಜ್ ಜೈನ್, ಸೀನಿಯರ್ ಚೇಂಬರ್ ಕೋಶಾಧಿಕಾರಿ ಸತ್ಯನಾರಾಯಣ ರಾವ್, ಗ್ರಾಮ ಪಂ. ಸದಸ್ಯ ಮನೊಜ್ ವಳವೂರು, ವೆನ್ ಲಾಕ್ ನೇತ್ರ ತಜ್ಞರಾದ ಡಾ |ಪ್ರೇರಣಾ , ಪಿಡಿಒ ಚಂದ್ರಾವತಿ, ಲಕ್ಷ್ಮಿ ವಿಷ್ಣು ಸಂಘದ ಅಧ್ಯಕ್ಷ ಸುಧೀಂದ್ರ, ಉಪಸ್ಥಿತರಿದ್ದರು
ರೋಟರಿ ಅಧ್ಯಕ್ಷ ಪಿ.ಎ.ರಹೀಂ ಅದ್ಯಕ್ಷತೆ ವಹಿಸಿ ಮಾತನಾಡಿ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನೂ ಶ್ಲಾಘಿಸಿದರು. ಸೀನಿಯರ್ ಛೇಂಬರ್ ಅದ್ಯಕ್ಷ ಡಾ.ಆನಂದ್ ಬಂಜನ್ ಸ್ವಾಗತಿಸಿ, ಸೀನಿಯರ್ ಛೇಂಬರ್ ಸ್ಥಾಕಾದ್ಯಕ್ಷ ಜಯಾನಂದ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು, ಸುದೀರ್ ಜಾರಂದಗುಡ್ಡೆ ದನ್ಯವಾದವಿತ್ತರು.
ಸುಮಾರು 118 ಜನ ಈ ಶಿಬಿರದ ಪ್ರಯೋಜನ ಪಡೆದು 65 ಜನ ಅರ್ಹರಿಗೆ ಸ್ಥಳದಲ್ಲಿಯೇ ಕನ್ನಡಕ ವಿತರಿಸಲಾಯಿತು.16 ಜನರಿಗೆ ಕ್ಯಾಟ್ರಾಕ್ಟ್ ( ಕಣ್ಣಿನ ಪೊರೆ) ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.














