ಕರ್ನಾಟಕ ಮಿನಿ ಕ್ರೀಡಾಕೂಟ ಜೂಡೋದಲ್ಲಿ ಕೊಡ್ಮಾಣ್ ಶಾಲಾ ವಿದ್ಯಾರ್ಥಿನಿ ಅನುಶ್ರೀ ಕಂಚಿನ ಪದಕ .

Coastal Bulletin
ಕರ್ನಾಟಕ ಮಿನಿ ಕ್ರೀಡಾಕೂಟ ಜೂಡೋದಲ್ಲಿ ಕೊಡ್ಮಾಣ್ ಶಾಲಾ ವಿದ್ಯಾರ್ಥಿನಿ ಅನುಶ್ರೀ ಕಂಚಿನ ಪದಕ .

ಬಂಟ್ವಾಳ: ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ 4ನೇ ಮಿನಿ ಕ್ರೀಡಾಕೂಟದಲ್ಲಿ ಕೊಡ್ಮಾಣ್ ಸರಕಾರಿ ಶಾಲೆಯ ವಿದ್ಯಾರ್ಥಿನಿ ಅನುಶ್ರೀ ಜೂಡೋ (44 ಕೆಜಿ ವಿಭಾಗ) ಪಂದ್ಯಾಟದಲ್ಲಿ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಗೆದ್ದಕೊಂಡಿದ್ದಾರೆ. ನ.2 ರಿಂದ ನ.9 ರವರೆಗೆ 4ನೇ ಮಿನಿ ಕ್ರೀಡಾಕೂಟ ನಡೆಯಲಿದ್ದು ಬಂಟ್ಚಾಳ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭೆಯ ಈ ಸಾಧನೆ ಹೆಮ್ಮೆ ತಂದಿದೆ.

ನೆತ್ತರಕೆರೆ ಸರಕಾರಿ ಶಾಲೆಯಲ್ಲಿ ಮಾರ್ಷಲ್ ಆರ್ಟ್ ತರಬೇತುದಾರರಾದ ಅಸ್ಮಿತಾ ರೈ ಹಾಗೂ ಹಂಸಿಕಾ ಅವರಿಂದ ಅನುಶ್ರೀ ತರಬೇತಿ ಪಡೆದಿದ್ದಾರೆ. ನೆತ್ತರಕೆರೆ ಶಾಲೆಯಲ್ಲಿ ಸ್ಥಳೀಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರ್ಷಲ್ ಆರ್ಟ್ ಗಳಾದ ಕರಾಟೆ, ಜೂಡೋ, ಕಳಾರಿ ಪೈಟ್ ಮತ್ತಿತರ ಯುದ್ದ ಕೌಶಲ್ಯ

ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ನೆತ್ತರಕೆರೆ ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿನಿಯ ಈ ಸಾಧನೆಗೆ ನೆತ್ತರಕೆರೆ ಶಾಲಾ ಮುಖ್ಯೋಪಾಧ್ಯಾಯರು, ಎಸ್ ಡಿ ಎಂ ಸಿ ಅಧ್ಯಕ್ಷ ದಾಮೋದರ್ ನೆತ್ತರಕೆರೆ, ಸದಸ್ಯ ಸಂತೋಷ್ ನೆತ್ತರಕೆರೆ ಹಾಗೂ ಕೊಡ್ಮಾಣ್ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಅಭಿನಂದನೆ ಸಲ್ಲಿಸಿದ್ದಾರೆ.

Leave a Comment