ಬಂಟ್ವಾಳ: ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಯ ಸಮೀಪ ರೈಲ್ವೆ ಹಳಿಯಲ್ಲಿ ನಿಷೇಧಿತ ಅಮಲು ಪದಾರ್ಥಗಳನ್ನು ಹೊಂದಿದ್ದ ವ್ಯಕ್ತಿಯೋರ್ವನನ್ನು ಬಂಟ್ವಾಳ ಅಬಕಾರಿ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ಮೂಲದ ಸಂತೋಷ್ ಸೋಂಕರ್ (28) ಎಂದು ಗುರತಿಸಲಾಗಿದೆ.
ಮಾಹಿತಿಯ ಪ್ರಕಾರ ಆರೋಪಿ ಬಿ.ಸಿ. ರೋಡಿನ ರೈಲ್ವೆ ಹಳಿಯಲ್ಲಿ ಗಿರಾಕಿಗಳಿಗೆ ನೀಡುವ ಉದ್ದೇಶದಿಂದ ಅಲೆದಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಬಕಾರಿ ಪೋಲೀಸರು ದಾಳಿ ನಡೆಸಿ ಆರೋಪಿಯಿಂದ 58650 ರೂ ಮೌಲ್ಯದ ಸೊತ್ತು, 1173 ಪ್ಲಾಸ್ಟಿಕ್ ಸ್ಯಾಚೆಟ್ ಗಳಲ್ಲಿ ಗಾಂಜಾ ಪದಾರ್ಥವನ್ನು ಹೊಂದಿದ್ದು , ಒಟ್ಟು 6 ಕೆಜಿ 590 ಗ್ರಾಂ ಗಾಂಜಾ ಉಂಡೆಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡು NDPS
ಕಾಯಿದೆ 1985 ರಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಹಾಗೂ ಬಂಟ್ವಾಳ ಉಪ ಅಧೀಕ್ಷರ ಮಾರ್ಗದರ್ಶನದಂತೆ ಬಂಟ್ವಾಳ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ಹಾಗೂ ಪೇದೆಯವರಾದ ಪ್ರಕಾಶ್ ಬಸವರಾಜ್, ಶ್ರೀನಿವಾಸ ಅವರು ಕಾರ್ಯಚರಣೆ ನಡೆಸಿದ್ದಾರೆ, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.















