ಯಕ್ಷಗಾನ ಗುರು, ವಿದ್ವಾಂಸ, ಕಲಾ ತಪಸ್ವಿ ಗಣೇಶ್ ಕೊಲೆಕಾಡಿ ಅಸ್ತಂಗತ.

Coastal Bulletin
ಯಕ್ಷಗಾನ ಗುರು, ವಿದ್ವಾಂಸ, ಕಲಾ ತಪಸ್ವಿ ಗಣೇಶ್ ಕೊಲೆಕಾಡಿ ಅಸ್ತಂಗತ.

ಛಾಂದಸ ಕವಿ, ಪ್ರಸಂಗಕರ್ತ, ಯಕ್ಷಗಾನ ಗುರು ಕವಿ, ವಿದ್ವಾಂಸ ಮತ್ತು ಗೀತ ನಾಟಕಕಾರ ಗಣೇಶ್ ಕೊಲೆಕಾಡಿ ಅವರು ನ.7 ರಂದು ನಿಧನರಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ. 60ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ, ತುಳು ಮತ್ತು ಕನ್ನಡದಲ್ಲಿ ಆರು ನಾಟಕಗಳನ್ನು ರಚಿಸಿದ್ದ

ಗಣೇಶ್ ಕೊಲೆಕಾಡಿಯವರು ತಾಳಮದ್ದಳೆಯ ಅರ್ಥಧಾರಿಗಳು ಕೂಡ ಆಗಿದ್ದರು.ಯಕ್ಷ ಕವಿ ಪರಂಪರೆಯ ಮಹತ್ವದ ವ್ಯಕ್ತಿತ್ವವೊಂದು ಕಣ್ಮರೆಯಾಯಿತು.

ಇವರ ನಿಧನಕ್ಕೆ ಕಲಾವಿದರು , ಅಪಾರ ಯಕ್ಷಗಾನ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Leave a Comment